ಬ್ರಿಟನ್ ದೊರೆಗೆ ಪ್ರಧಾನಿ ಮೋದಿಯಿಂದ ವಿಶೇಷ ಉಡುಗೊರೆ
Update: 2025-07-25 14:10 IST
Photo credit: X/ @RoyalFamily
ಲಂಡನ್: ಗುರುವಾರ ಬ್ರಿಟನ್ ದೊರೆ ಮೂರನೆಯ ಕಿಂಗ್ಸ್ ಚಾರ್ಲ್ಸ್‌ರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದರು.
'ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನದ ಭಾಗವಾಗಿ ಮೂರನೆಯ ಕಿಂಗ್ಸ್ ಚಾರ್ಲ್ಸ್ ಅವರಿಗೆ ಪ್ರಧಾನಿ ಮೋದಿ ಗಿಡವೊಂದನ್ನು ಉಡುಗೊರೆಯಾಗಿ ನೀಡಿದರು. ಈ ಕುರಿತು ಬ್ರಿಟನ್ ರಾಜ ಮನೆತನ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ:
"ಗುರುವಾರ ಐತಿಹಾಸಿಕ ಒಪ್ಪಂದವೊಂದಕ್ಕೆ ಭಾರತ ಮತ್ತು ಬ್ರಿಟನ್ ಸಹಿ ಹಾಕಿದವು. ಇದು ಎರಡೂ ದೇಶಗಳ ಪಾಲಿಗೆ ಐತಿಹಾಸಿಕವೆಂದು ನಾನು ಭಾವಿಸಿದ್ದೇನೆ. ನಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಕ್ಕೆ ನನಗೆ ಸಂತಸವಾಗುತ್ತಿದೆ" ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹರ್ಷ ವ್ಯಕ್ತಪಡಿಸಿದ್ದಾರೆ.