×
Ad

ಕ್ಯಾಥೋಲಿಕ್ ಚರ್ಚ್ ವಿಶ್ವದಲ್ಲಿ ಶಾಂತಿಯ ಸಂಕೇತವಾಗುವಂತೆ ಏಕತೆಗಾಗಿ ಶ್ರಮಿಸುತ್ತೇನೆ : ಪೋಪ್ ಲಿಯೋ

Update: 2025-05-18 21:04 IST

ಹೊಸದಿಲ್ಲಿ : ಕ್ಯಾಥೋಲಿಕ್ ಚರ್ಚ್ ವಿಶ್ವದಲ್ಲಿ ಶಾಂತಿಯ ಸಂಕೇತವಾಗುವಂತೆ ಏಕತೆಗಾಗಿ ಶ್ರಮಿಸುತ್ತೇನೆ ಎಂದು ಪೋಪ್ ಲಿಯೋ 14 ಪ್ರತಿಜ್ಞೆ ಮಾಡಿದರು.

ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಸುಮಾರು 1,50,000 ಜನರ ಸಮ್ಮುಖದಲ್ಲಿ ನಡೆದ ಉದ್ಘಾಟನಾ ಪ್ರಾರ್ಥನೆಯಲ್ಲಿ ಅವರು ಈ ಸಂದೇಶವನ್ನು ನೀಡಿದರು.

ಪೋಪ್ ಲಿಯೋ ಪೋಪ್ ಆಗಿ ಅಧಿಕೃತವಾಗಿ ವ್ಯಾಟಿಕನ್‌ನಲ್ಲಿ ತಮ್ಮ ಮೊದಲ ಪ್ರಯಾಣವನ್ನು ಕೈಗೊಂಡರು. ನೆರೆದ ಜನರಿಗೆ ಕೈ ಬೀಸಿ ಆಶೀರ್ವಾದಿಸಿದರು.

ಅಧಿಕಾರದ ಎರಡು ಆಯಾಮಗಳಾದ ಪ್ರೀತಿ ಮತ್ತು ಏಕತೆಯ ಮೂಲಕ ಸೇವಕನಾಗಲು ಬಯಸುತ್ತೇನೆ. ಇದರಿಂದಾಗಿ ಚರ್ಚ್ ಜಗತ್ತಿನಲ್ಲಿ ಶಾಂತಿಗೆ ಒಂದು ಶಕ್ತಿಯಾಗಬಹುದು ಎಂದು ಪೋಪ್ ಲಿಯೋ ಹೇಳಿದರು.

ಉಕ್ರೇನ್‌ನಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸುವ ಮಾತುಕತೆಗಳ ಬಗ್ಗೆ ಪೋಪ್ ಲಿಯೋ ಭರವಸೆ ವ್ಯಕ್ತಪಡಿಸಿದರು. ಗಾಝಾದ ಜನರಿಗಾಗಿ, ಹಸಿವಿನಿಂದ ಬಳಲುತ್ತಿರುವ ಮಕ್ಕಳು, ಕುಟುಂಬಗಳು ಮತ್ತು ವೃದ್ಧರಿಗಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News