ಪೊಲೀಸ್ ವಾಹನ ಢಿಕ್ಕಿಯಾಗಿ ಮೃತಪಟ್ಟ ಜಾಹ್ನವಿಗೆ ಮರಣೋತ್ತರ ಪದವಿ: ಅಮೆರಿಕ ವಿವಿ ಘೋಷಣೆ
Update: 2023-09-15 22:48 IST
Photo: twitter/DcWalaDesi
ನ್ಯೂಯಾರ್ಕ್: ಹ್ಯೂಸ್ಟನ್ ನಗರದಲ್ಲಿ ಪೊಲೀಸ್ ವಾಹನವೊಂದು ಢಿಕ್ಕಿಯಾಗಿ ಮೃತಪಟ್ಟ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾಗೆ ಮರಣೋತ್ತರ ಪದವಿ ನೀಡಲಾಗುವುದು ಎಂದು ನಾರ್ಥ್‍ಈಸ್ಟರ್ನ್ ವಿವಿಯ ಕುಲಪತಿ ಘೋಷಿಸಿದ್ದಾರೆ.
ವಿವಿಯ ಕ್ಯಾಂಪಸ್‍ನಾದ್ಯಂತದ ನಮ್ಮ ಎಲ್ಲಾ ಭಾರತೀಯ ವಿದ್ಯಾರ್ಥಿ ಸಮುದಾಯ ಈ ದುರಂತದಿಂದ ಆಘಾತಕ್ಕೆ ಒಳಗಾಗಿರುವುದನ್ನು ನಾವು ಗಮನಿಸಿದ್ದೇವೆ. ನಾವು ನಿಮ್ಮೊಂದಿಗೆ ಇದ್ದೇವೆ ಮತ್ತು ನಡೆಯುತ್ತಿರುವ ತನಿಖೆಗಳು ನ್ಯಾಯ ಹಾಗೂ ಉತ್ತರದಾಯಿತ್ವದ ಭರವಸೆಯನ್ನು ಒದಗಿಸಲಿದೆ. ಮೃತ ವಿದ್ಯಾರ್ಥಿನಿ ಜಾಹ್ನವಿಗೆ ನೀಡುವ ಮರಣೋತ್ತರ ಪದವಿಯನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು' ಎಂದು ವಿವಿಯ ಹೇಳಿಕೆ ತಿಳಿಸಿದೆ.