×
Ad

ನಿಮ್ಮ ಪಾಲುದಾರರಾಗಿರುವುದಕ್ಕೆ ಹೆಮ್ಮೆ, ಸಂತೋಷವಾಗಿದೆ: ಚಂದ್ರಯಾನ-3 ಯಶಸ್ಸಿಗೆ ಭಾರತವನ್ನು ಶ್ಲಾಘಿಸಿದ ಅಮೆರಿಕ

Update: 2023-08-24 13:26 IST

Screengrab: @SenBillNelson | Twitter

ವಾಷಿಂಗ್ಟನ್ : ಚಂದ್ರನ ಅಂಗಳದಲ್ಲಿ ವಿಕ್ರಮ ಲ್ಯಾಂಡರ್ ರನ್ನು  ಲ್ಯಾಂಡಿಂಗ್ ಮಾಡಿ ಬುಧವಾರ ಚಂದ್ರಯಾನ-3 ರಲ್ಲಿ ಯಶಸ್ವಿ ಯಾಗಿರುವ ಭಾರತದ ಸಾಧನೆಯನ್ನು ಅಮೆರಿಕದ ರಾಜಕಾರಣಿಗಳು, ಪತ್ರಿಕೆಗಳು ಹಾಗೂ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಶ್ಲಾಘಿಸಿದ್ದು, ಯುನೈಟೆಡ್ ಸ್ಟೇಟ್ಸ್, ರಶ್ಯ ಹಾಗೂ ಚೀನಾದ ನಂತರ ಚಂದ್ರನ ಮೇಲ್ಮೈಯಲ್ಲಿ ತಲುಪಿದ ವಿಶ್ವದ 4ನೇ ದೇಶವೆಂಬ ಹಿರಿಮೆಗೆ ಭಾರತವು ಭಾಜನವಾಗಿದೆ.

ಈ ಪ್ರಕ್ರಿಯೆಯಲ್ಲಿ, ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ತನ್ನ ರೋವರ್ ಅನ್ನು ಹೊಂದಿರುವ ಗಣ್ಯ ಗುಂಪಿನಲ್ಲಿ ಮೊದಲ ದೇಶ ಎನಿಸಿಕೊಂಡಿತು.

"ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರಯಾನ-3 ಐತಿಹಾಸಿಕ ಲ್ಯಾಂಡಿಂಗ್ ಗಾಗಿ ಭಾರತಕ್ಕೆ ಅಭಿನಂದನೆಗಳು" ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಎಕ್ಸ್ ನಲ್ಲಿ ಹೇಳಿದ್ದಾರೆ.

" ಎಲ್ಲಾ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳು ಒಳಗೊಂಡಿರುವ ಇದು ನಂಬಲಾಗದ ಸಾಧನೆಯಾಗಿದೆ. ಈ ಮಿಷನ್ ಹಾಗೂ ಬಾಹ್ಯಾಕಾಶ ಪರಿಶೋಧನೆಯಲ್ಲಿ ನಿಮ್ಮೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ" ಎಂದು ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಮುಖ್ಯಸ್ಥರಾಗಿರುವ ಕಮಲಾ ಹ್ಯಾರಿಸ್ ಹೇಳಿದ್ದಾರೆ.

"ನಿಮ್ಮ ಯಶಸ್ವಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವ ಲ್ಯಾಂಡಿಂಗ್ಗೆ ಅಭಿನಂದನೆಗಳು ISRO! ಮತ್ತು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ 4 ನೇ ದೇಶವಾಗಿರುವ ಭಾರತಕ್ಕೆ ಅಭಿನಂದನೆಗಳು. ಈ ಕಾರ್ಯಾಚರಣೆಯಲ್ಲಿ ನಿಮ್ಮ ಪಾಲುದಾರರಾಗಲು ನಮಗೆ ಸಂತೋಷವಾಗಿದೆ!" ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಐತಿಹಾಸಿಕ ಲ್ಯಾಂಡಿಂಗ್ ಗಾಗಿ ಇಸ್ರೋ ಮತ್ತು ಭಾರತದ ಜನತೆಗೆ ಅಭಿನಂದನೆಗಳು. ಮುಂದಿನ ವರ್ಷಗಳಲ್ಲಿ ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದೊಂದಿಗೆ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಆಳವಾಗಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.

ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಭಾರತಕ್ಕೆ ಐತಿಹಾಸಿಕ ಸಾಧನೆಯಾಗಿದೆ ಮತ್ತು ಜಗತ್ತಿಗೆ ಚಂದ್ರನ ಅನ್ವೇಷಣೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಭಾರತೀಯ-ಅಮೇರಿಕನ್ ಕಾಂಗ್ರೆಸ್ಸಿಗ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.

ಹಲವಾರು ಗಣ್ಯರಿಂದಲೂ ಅಭಿನಂದನಾ ಸಂದೇಶ ಬಂದಿತ್ತು. ಮೈಕ್ರೋಸಾಫ್ಟ್ ನ ಭಾರತೀಯ ಅಮೇರಿಕನ್ ಸಿಇಒ ಸತ್ಯ ನಾಡೆಲ್ ಹಾಗೂ ಗೂಗಲ್ನ ಸುಂದರ್ ಪಿಚೈ ಅವರು ಭಾರತದ ಮಿಷನ್ ನ ಯಶಸ್ಸನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News