×
Ad

ರಶ್ಯ-ಉಕ್ರೇನ್ ನೇರ ಮಾತುಕತೆಯ ಬಗ್ಗೆ ಪುಟಿನ್-ಟ್ರಂಪ್ ಚರ್ಚೆ

Update: 2025-08-19 22:30 IST

PC | Reuters

ವಾಷಿಂಗ್ಟನ್: ಶ್ವೇತಭವನದಲ್ಲಿ ಸೋಮವಾರ ತಡರಾತ್ರಿ ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಹಾಗೂ ಯುರೋಪಿಯನ್ ನಾಯಕರ ಜೊತೆಗೆ ನಡೆಸಿದ ಸಭೆಯ ಅಂತ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಶ್ಯ ಅಧ್ಯಕ್ಷ ಪುಟಿನ್‍ರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.

`ಸಭೆಯ ಅಂತ್ಯದಲ್ಲಿ ನಾನು ಅಧ್ಯಕ್ಷ ಪುಟಿನ್‍ಗೆ ಕರೆ ಮಾಡಿದೆ ಮತ್ತು ಉಕ್ರೇನ್-ರಶ್ಯ ಅಧ್ಯಕ್ಷರ ನಡುವಿನ ಶಾಂತಿ ಸಭೆಗೆ ಸಿದ್ಧತೆ ಆರಂಭಿಸಿದ್ದೇನೆ. ಸಭೆಯ ಸ್ಥಳದ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ನಂತರ ರಶ್ಯ ಮತ್ತು ಉಕ್ರೇನ್ ಅಧ್ಯಕ್ಷರೊಂದಿಗೆ ತ್ರಿಪಕ್ಷೀಯ ಸಭೆ ನಡೆಸಲಿದ್ದೇನೆ. ರಶ್ಯ ಮತ್ತು ಉಕ್ರೇನ್‍ಗೆ ಶಾಂತಿಯ ಸಾಧ್ಯತೆಯ ಬಗ್ಗೆ ಪ್ರತಿಯೊಬ್ಬರೂ ತುಂಬಾ ಸಂತೋಷವಾಗಿದ್ದಾರೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಧ್ಯೆ, ಝೆಲೆನ್‍ಸ್ಕಿಯನ್ನು ಭೇಟಿಯಾಗಲು ಸಿದ್ಧವಿರುವುದಾಗಿ ಪುಟಿನ್ ಟ್ರಂಪ್‍ಗೆ ಹೇಳಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ರಶ್ಯದೊಂದಿಗೆ ಶಾಂತಿ ಒಪ್ಪಂದದ ಭಾಗವಾಗಿ ಉಕ್ರೇನ್‍ಗೆ ಭದ್ರತಾ ಖಾತರಿಯ ಬಗ್ಗೆಯೂ ಟ್ರಂಪ್ ಚರ್ಚೆ ನಡೆಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News