×
Ad

ಉಕ್ರೇನ್‍ಗೆ ಟಾಮ್‍ಹಾಕ್ ಕ್ಷಿಪಣಿ ಪೂರೈಸಿದರೆ ಸಂಬಂಧಕ್ಕೆ ಹಾನಿ : ಅಮೆರಿಕಾಕ್ಕೆ ಪುಟಿನ್ ಎಚ್ಚರಿಕೆ

Update: 2025-10-06 21:05 IST

ವ್ಲಾದಿಮಿರ್ ಪುಟಿನ್ | Photo Credit : PTI

ಮಾಸ್ಕೋ, ಅ.6: ರಶ್ಯದೊಳಗೆ ಆಳವಾಗಿ ದಾಳಿ ಮಾಡಲು ಉಕ್ರೇನ್‍ಗೆ ಟೊಮಹಾಕ್ ಕ್ಷಿಪಣಿಗಳನ್ನು ಒದಗಿಸುವುದರ ವಿರುದ್ಧ ಅಮೆರಿಕಾಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.

ರಶ್ಯದೊಳಗೆ ಆಳವಾಗಿ ನುಗ್ಗಿ ದಾಳಿ ನಡೆಸಲು ಉಕ್ರೇನ್‍ಗೆ ದೀರ್ಘ ಶ್ರೇಣಿಯ ಟೊಮಹಾಕ್ ಕ್ಷಿಪಣಿಗಳನ್ನು ಪೂರೈಸುವ ಬಗ್ಗೆ ಅಮೆರಿಕಾ ಪರಿಶೀಲಿಸುತ್ತಿದೆ ಎಂದು ಕಳೆದ ತಿಂಗಳು ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಘೋಷಿಸಿದ್ದರು.

ಇಂತಹ ಕ್ರಮಗಳು ನಮ್ಮ ಸಂಬಂಧಗಳನ್ನು ಅಥವಾ ಕನಿಷ್ಠ ಇತ್ತೀಚಿನ ದಿನಗಳಲ್ಲಿ ಹೊರಹೊಮ್ಮಿದ ಧನಾತ್ಮಕ ಬೆಳವಣಿಗೆಗಳನ್ನು ಹಾಳು ಮಾಡುತ್ತವೆ ಎಂದು ಪುಟಿನ್ ಹೇಳಿದ್ದು ಉಕ್ರೇನ್‍ಗೆ ಇಂತಹ ಕ್ಷಿಪಣಿಗಳ ಯಾವುದೇ ಸರಬರಾಜು ಗುಣಾತ್ಮಕವಾಗಿ ಹೊಸ ಹಂತದ ಉಲ್ಬಣವನ್ನು ಪ್ರಚೋದಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಟಾಮ್‍ಹಾಕ್ ಕ್ಷಿಪಣಿಗಳು 2,500 ಕಿ.ಮೀ ದೂರದ ವ್ಯಾಪ್ತಿಯನ್ನು ಹೊಂದಿದ್ದು ಇದು ಮಾಸ್ಕೋ ಮತ್ತು ಎಲ್ಲಾ ಯುರೋಪಿಯನ್ ರಶ್ಯವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ವಾಲ್‍ಸ್ಟ್ರೀಟ್ ಜರ್ನಲ್ ಪತ್ರಿಕೆಯ ಪ್ರಕಾರ ಅಮೆರಿಕಾವು ರಶ್ಯದ ಇಂಧನ ಮೂಲಸೌಕರ್ಯ ಗುರಿಗಳ ಕುರಿತ ಗುಪ್ತಚರ ಮಾಹಿತಿಗಳನ್ನು ಉಕ್ರೇನ್‍ಗೆ ಒದಗಿಸಲಿದ್ದು ಇಂತಹ ದಾಳಿಗಳಲ್ಲಿ ಬಳಸುವ ಕ್ಷಿಪಣಿಗಳನ್ನು ಪೂರೈಸಬೇಕೇ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ದೀರ್ಘ ಶ್ರೇಣಿಯ ಟೊಮ್‍ಹಾಕ್ ಕ್ಷಿಪಣಿಗಳನ್ನು ಉಕ್ರೇನ್‍ಗೆ ಕಳುಹಿಸುವ ಟ್ರಂಪ್ ಆಡಳಿತದ ಉದ್ದೇಶ ಕಾರ್ಯಸಾಧ್ಯವಲ್ಲ. ಯಾಕೆಂದರೆ ಪ್ರಸ್ತುತ ದಾಸ್ತಾನುಗಳು ಅಮೆರಿಕಾದ ನೌಕಾಪಡೆ ಹಾಗೂ ಇತರ ಬಳಕೆಗಳಿಗೆ ಬದ್ಧವಾಗಿವೆ ಎಂದು ಅಮೆರಿಕಾದ ಉನ್ನತ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News