×
Ad

ಪುಟಿನ್ ಪ್ರತಿಸ್ಪರ್ಧಿಗೆ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ನಿರ್ಬಂಧ

Update: 2024-02-08 22:09 IST

Photo : PTI

ಮಾಸ್ಕೊ : ಯುದ್ಧ ವಿರೋಧಿ ಮುಖಂಡ ಬೋರಿಸ್ ನದೆಹ್ದಿನ್ ಮುಂದಿನ ತಿಂಗಳು ನಡೆಯಲಿರುವ ರಶ್ಯದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ರಶ್ಯದ ಚುನಾವಣಾ ಆಯೋಗ ಗುರುವಾರ ತಿರಸ್ಕರಿಸಿದೆ.

ಎರಡು ದಶಕಗಳಿಗೂ ಅಧಿಕ ಸಮಯದಿಂದ ಅಧಿಕಾರದಲ್ಲಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬದ್ಧ ಪ್ರತಿಸ್ಪರ್ಧಿಯೆಂದು ಗುರುತಿಸಿಕೊಂಡಿದ್ದ ಬೋರಿಸ್ ಮಾರ್ಚ್ 15ರಿಂದ 17ರವರೆಗೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್‍ರನ್ನು ಸೋಲಿಸುವ ವಿಶ್ವಾಸದಲ್ಲಿದ್ದರು. ಇದೀಗ ಬಹುತೇಕ ಎಲ್ಲಾ ವಿಪಕ್ಷ ಮುಖಂಡರ ಸ್ಪರ್ಧೆಯನ್ನು ನಿಷೇಧಿಸಿದಂತಾಗಿದ್ದು ಪುಟಿನ್ ಅವರನ್ನು ಬೆಂಬಲಿಸುವ ಮೂರು ಪಕ್ಷಗಳ ಅಭ್ಯರ್ಥಿಗಳು ಔಪಚಾರಿಕವಾಗಿ ಸ್ಪರ್ಧಿಸುತ್ತಿದ್ದು ಪುಟಿನ್ ಗೆಲುವು ಬಹುತೇಕ ಖಚಿತವಾಗಿದೆ.

ಬೋರಿಸ್ ನದೆಹ್ದಿನ್ ಅವರ ನಾಮಪತ್ರವನ್ನು ಅನುಮೋದಿಸಿದ 1,05,000 ಜನರಲ್ಲಿ 9 ಸಾವಿರ ಜನರ ಹೆಸರು, ವಿಳಾಸ ಮತ್ತಿತರ ದಾಖಲೆಗಳಲ್ಲಿ ವ್ಯತ್ಯಾಸವಿದೆ. ನಿಯಮದ ಪ್ರಕಾರ ತಪ್ಪಿನ ಪ್ರಮಾಣ 5 ಶೇ. ವನ್ನು ಮೀರಿದ್ದರೆ ನಾಮಪತ್ರವನ್ನು ತಿರಸ್ಕರಿಸಬಹುದಾಗಿದೆ. ಆದ್ದರಿಂದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಬೋರಿಸ್ ನದೆಹ್ದಿನ್ ಹೆಸರು ನೋಂದಾವಣೆ ತಿರಸ್ಕರಿಸಲಾಗಿದೆ' ಎಂದು ಗುರುವಾರ ನಡೆದ ರಶ್ಯ ಕೇಂದ್ರ ಚುನಾವಣಾ ಆಯೋಗದ ಸಭೆಯ ಬಳಿಕ ಘೋಷಿಸಲಾಗಿದೆ. ಆಯೋಗದ ಕ್ರಮವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಬೋರಿಸ್ ನದೆಹ್ದಿನ್ ಹೇಳಿದ್ದಾರೆ.    

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News