×
Ad

ಖತರ್ | ಅಮೆರಿಕದ ನಾಗರಿಕರು ಸುರಕ್ಷಿತರಾಗಿರುವಂತೆ ರಾಯಭಾರ ಕಚೇರಿಯಿಂದ ಸೂಚನೆ

Update: 2025-06-23 18:16 IST

ಸಾಂದರ್ಭಿಕ ಚಿತ್ರ | PC : freepik.com

ದೋಹಾ: ಇರಾನ್ ನ ಪರಮಾಣು ನೆಲೆಗಳ ಮೇಲೆ ಅಮೆರಿಕವು ದಾಳಿ ಮಾಡಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವುದರಿಂದ ಅಮೆರಿಕದ ನಾಗರಿಕರು ಸುರಕ್ಷಿತರಾಗಿರುವಂತೆ ರಾಯಭಾರ ಕಚೇರಿಯು ಈ ಮೇಲ್ ಮೂಲಕ ಸೂಚನೆ ನೀಡಿದೆ.

ಖತರ್ ನಲ್ಲಿರುವ ಅಮೆರಿಕ ನಾಗರಿಕರಿಗೆ ಇಮೇಲ್ ಸಂದೇಶವೊಂದರಲ್ಲಿ, ಮುಂದಿನ ಸೂಚನೆ ಬರುವವರೆಗೂ ಅವರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ರಾಯಭಾರ ಕಚೇರಿ ಶಿಫಾರಸು ಮಾಡಿದೆ. ಅಮೆರಿಕವು ದಾಳಿ ಮಾಡಿದ ಬಳಿಕ ಇರಾನ್ ಪ್ರತಿಕಾರ ತೀರಿಸುವುದಾಗಿ ಹೇಳಿಕೆ ನೀಡಿದೆ.

ಖತರ್ ನಲ್ಲಿರುವ ಅಲ್ ಉದೈದ್ ವಾಯುನೆಲೆಯು ಗಲ್ಫ್ ನಲ್ಲಿರುವ ಅಮೆರಿಕದ ಅತೀ ದೊಡ್ಡ ವಾಯುನೆಲೆಯಾಗಿದ್ದು, ಸುಮಾರು 10 ಸಾವಿರ ಅಮೆರಿಕದ ಸೈನಿಕರನ್ನು ಹೊಂದಿದೆ. ಈ ವಾಯುನೆಲೆಯು ಅಮೆರಿಕದ ಸೆಂಟ್ರಲ್ ಕಮಾಂಡ್ ಆಗಿ ಕಾರ್ಯಾಚರಿಸುತ್ತಿದೆ ಎಂದು Aljazeera ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News