×
Ad

ಖತರ್‌ನಿಂದ ಟ್ರಂಪ್‌ ಗೆ ವಿಲಾಸಿ ವಿಮಾನ ಉಡುಗೊರೆ!

Update: 2025-05-12 23:03 IST

PC : livemint.com

ದೋಹಾ: ಖತರ್ ರಾಜ ಕುಟುಂಬವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ಅತ್ಯಂತ ವಿಲಾಸಿ ಖಾಸಗಿ ವಿಮಾನವೊಂದನ್ನು ಉಡುಗೊರೆಯಾಗಿ ನೀಡಲಿದೆ.

400 ಮಿಲಿಯ ಡಾಲರ್ (ಸುಮಾರು 3,400 ಕೋಟಿ ರೂಪಾಯಿ) ಬೆಲೆಯ ಬೋಯಿಂಗ್ 747-8 ವಿಮಾನವನ್ನು ತಾತ್ಕಾಲಿಕವಾಗಿ ಅಮೆರಿಕದ ಏರ್ ಫೋರ್ಸ್ ವನ್ ವಿಮಾನವಾಗಿ ಬಳಸಲು ಉದ್ದೇಶಿಸಲಾಗಿದೆ.

ಈ ವಿಲಾಸಿ ವಿಮಾನವನ್ನು ‘‘ಹಾರುವ ಅರಮನೆ’’ ಎಂಬುದಾಗಿ ಕರೆಯಲಾಗಿದೆ. ಅದರಲ್ಲಿ ವಿಲಾಸಿ ವಿನ್ಯಾಸದ ಸ್ನಾನದ ಕೋಣೆಗಳು, ಮಲಗುವ ಕೋಣೆಗಳು ಇವೆ.

ಅಮೆರಿಕದ 47ನೇ ಅಧ್ಯಕ್ಷ ಟ್ರಂಪ್ ಈ ವಿಮಾನವನ್ನು ತನ್ನ ಅಧಿಕಾರಾವಧಿ ಮುಗಿಯುವವರೆಗೆ ಬಳಸುತ್ತಾರೆ. ಬಳಿಕ, ಟ್ರಂಪ್‌ ರ ಅಧ್ಯಕ್ಷೀಯ ವಾಚನಾಲಯವನ್ನು ನಡೆಸುವ ಸಂಸ್ಥೆಗೆ ವಿಮಾನವನ್ನು ಹಸ್ತಾಂತರಿಸಲಾಗುವುದು. ಟ್ರಂಪ್‌ ರ ಅಧ್ಯಕ್ಷೀಯ ವಾಚನಾಲಯವು ಇನ್ನಷ್ಟೇ ಅಸ್ತಿತ್ವಕ್ಕೆ ಬರಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News