×
Ad

ಐಸಿಸಿ ಮುಖ್ಯಸ್ಥರನ್ನು ಭೇಟಿಯಾದ ಖತರ್; ಇಸ್ರೇಲ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

Update: 2025-09-18 20:40 IST

PC : hrw.org

ಹೇಗ್: ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಅಧ್ಯಕ್ಷರನ್ನು ಭೇಟಿ ಮಾಡಿರುವ ಖತರ್ ಪ್ರತಿನಿಧಿ ಕಳೆದ ವಾರ ತನ್ನ ಭೂಪ್ರದೇಶದ ಮೇಲೆ ದಾಳಿ ನಡೆಸಿರುವ ಇಸ್ರೇಲ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿರುವುದಾಗಿ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಖತರ್ ಮೇಲಿನ ಇಸ್ರೇಲಿ ದಾಳಿಗೆ ಕಾರಣವಾದವರಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಲಭ್ಯವಿರುವ ಪ್ರತಿಯೊಂದು ಕಾನೂನು ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುವ ಖತರ್ ನ ಮುಖ್ಯ ಸಮಾಲೋಚಕ ಮುಹಮ್ಮದ್ ಅಲ್-ಖುಲೈಫಿ ಹೇಗ್‍ನಲ್ಲಿ ಐಸಿಸಿಯ ಅಧ್ಯಕ್ಷ, ನ್ಯಾಯಾಧೀಶ ಟೊಮೊಕೊ ಅಕಾನೆಯನ್ನು ಭೇಟಿಯಾಗಿದ್ದಾರೆ ಎಂದು ಖತರ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಐಸಿಸಿಯ ವೀಕ್ಷಕ ರಾಷ್ಟ್ರ ಸ್ಥಾನಮಾನ ಹೊಂದಿರುವ ಖತರ್ ಐಸಿಸಿಗೆ ಸ್ವತಃ ಪ್ರಕರಣಗಳನ್ನು ಉಲ್ಲೇಖಿಸಲು ಸಾಧ್ಯವಿಲ್ಲ. ಆದರೆ ದೋಹಾದಲ್ಲಿ ನಡೆದ ತುರ್ತು ಮಾತುಕತೆಯ ಬಳಿಕ ಅರಬ್ ಮತ್ತು ಇಸ್ಲಾಮಿಕ್ ಬಣಗಳು `ಇಸ್ರೇಲ್ ತನ್ನ ಕಾರ್ಯಗಳನ್ನು ಮುಂದುವರಿಸುವುದನ್ನು ತಡೆಯಲು ಸಾಧ್ಯವಿರುವ ಎಲ್ಲಾ ಪರಿಣಾಮಕಾರಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ' ತಮ್ಮ ಸದಸ್ಯರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಖತರ್ ಐಸಿಸಿಗೆ ಮನವಿ ಸಲ್ಲಿಸಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News