×
Ad

ಕೇವಲ ಕದನ ವಿರಾಮವಲ್ಲ, ನಿಜವಾದ ಅಂತ್ಯ ಬಯಸುತ್ತಿದ್ದೇನೆ : ಇಸ್ರೇಲ್- ಇರಾನ್ ಸಂಘರ್ಷದ ಬಗ್ಗೆ ಟ್ರಂಪ್ ಹೇಳಿಕೆ

Update: 2025-06-17 17:01 IST

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)

ವಾಷಿಂಗ್ಟನ್ : ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಐದನೇ ದಿನಕ್ಕೆ ಕಾಲಿಡುತ್ತಿದೆ. ಪ್ರಾದೇಶಿಕ ಯುದ್ಧದ ಭೀತಿ ಹೆಚ್ಚುತ್ತಿರುವ ಮಧ್ಯೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕಿಂತ ಹೆಚ್ಚಿನದ್ದನ್ನು (ಉತ್ತಮವಾದುದನ್ನು) ಬಯಸುತ್ತಿದ್ದೇನೆ ಎಂದು ಹೇಳಿದರು.

ಯುದ್ಧದ ಕುರಿತು ಮಾತನಾಡಿದ ಟ್ರಂಪ್‌, ಕದನ ವಿರಾಮಕ್ಕಿಂತ ಉತ್ತಮ ಎಂದರೆ ʼನಿಜವಾದ ಅಂತ್ಯʼ. ಕದನ ವಿರಾಮವಲ್ಲ. ʼಅಂತ್ಯʼ ಎಂದು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಕಳವಳ ಮತ್ತು ರಾಜತಾಂತ್ರಿಕ ತುರ್ತುಸ್ಥಿತಿಯ ಮಧ್ಯೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಇರಾನ್ ಜೊತೆ ರಾಜತಾಂತ್ರಿಕ ಮಾತುಕತೆಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಥವಾ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರಂತಹ ಹಿರಿಯರನ್ನು ಕಳುಹಿಸಬಹುದು ಎಂದು ಅಮೆರಿಕ ಅಧ್ಯಕ್ಷರು ಹೇಳಿರುವ ಬಗ್ಗೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News