×
Ad

ಗಲಭೆ ಪ್ರಕರಣ: ಇಮ್ರಾನ್ ಬಂಧನಕ್ಕೆ ಪಾಕ್ ನ್ಯಾಯಾಲಯ ಅನುಮತಿ

Update: 2023-08-24 23:37 IST

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್‍

ಲಾಹೋರ್, ಆ.24: ಮೇ 9ರಂದು ಪಾಕಿಸ್ತಾನದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್‍ರನ್ನು ಬಂಧಿಸಲು ಪಾಕಿಸ್ತಾನದ ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ಇಮ್ರಾನ್, ಒಂದು ವೇಳೆ ಜಾಮೀನು ಪಡೆದು ಹೊರಬಂದರೂ ಅವರನ್ನು ಮತ್ತೆ ಬಂಧಿಸಲು ಪೊಲೀಸರಿಗೆ ಅವಕಾಶ ದೊರಕಿದೆ. ಮೇ 9ರಂದು ಜಿನ್ನಾ ಹೌಸ್‍ನಲ್ಲಿ ಇಮ್ರಾನ್ ಬೆಂಬಲಿಗರು ನಡೆಸಿದ ದಾಂಧಲೆಗೆ ಇಮ್ರಾನ್ ಕುಮ್ಮಕ್ಕು ನೀಡಿದ್ದರು ಎಂಬ ಪ್ರಕರಣ ಇದಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News