×
Ad

ಇಸ್ರೇಲ್‌ ವಿಮಾನ ಆಗಮನದ ವದಂತಿ: ರಶ್ಯ ವಿಮಾನ ನಿಲ್ದಾಣಕ್ಕೆ ನುಗ್ಗಿದ ಗುಂಪು

Update: 2023-10-30 14:57 IST

Screengrab:X/@olex_scherba

ಮಾಸ್ಕೋ: ರಶ್ಯಾದ ಕಾಕಸಸ್‌ ರಿಪಬ್ಲಿಕ್‌ ಆಫ್‌ ಡೆಜೆಸ್ತಾನ್‌ನಲ್ಲಿನ ವಿಮಾನ ನಿಲ್ದಾಣಕ್ಕೆ ಇಸ್ರೇಲ್‌ನಿಂದ ವಿಮಾನವೊಂದು ಆಗಮಿಸುತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಇಸ್ರೇಲಿಗಳು ಮತ್ತು ಯಹೂದಿಗಳ ಹುಡುಕಾಟದಲ್ಲಿರುವ ಗುಂಪೊಂದು ವಿಮಾನ ನಿಲ್ದಾಣಕ್ಕೆ ನುಗ್ಗಿದ ಘಟನೆ ವರದಿಯಾಗಿದೆ.

ಹಲವಾರು ಪ್ರತಿಭಟನಾಕಾರರು ವಿಮಾನ ನಿಲ್ದಾಣದ ಬ್ಯಾರಿಕೇಡುಗಳನ್ನು ಸರಿಸಿ ಮುಂದುವರಿದರೆ ಕೆಲವರು ರನ್‌-ವೇಯಲ್ಲೂ ಓಡುತ್ತಿರುವುದು ಕಾಣಿಸಿರುವ ವೀಡಿಯೋಗಳು ಹರಿದಾಡುತ್ತಿವೆ.

ಈ ಘಟನೆಯ ನಂತರ ರಶ್ಯಾದ ವಾಯುಯಾನ ಸಂಸ್ಥೆಯು ಈ ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಇಲ್ಲಿಂದ ಹೊರಡುವ ವಿಮಾನ ನಿಲ್ದಾಣಗಳ ಹಾರಾಟ ಸ್ಥಗಿತಗೊಳಿಸಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದೆ. ಕೆಲವರಿಗೆ ಗಾಯಗಳಾಗಿವೆಯಾದರೂ ಈ ಕುರಿತು ಹೆಚ್ಚಿನ ಮಾಹಿತಿಯಿಲ್ಲ.

ಈ ವಿಮಾನ ನಿಲ್ದಾಣವು ನವೆಂಬರ್‌ 6ರ ತನಕ ಮುಚ್ಚಲಾಗುವುದು ಎಂದು ರಷ್ಯಾದ ವಾಯುಯಾನ ಏಜನ್ಸಿ ರೊಸವಿಯಾಟ್ಸಿಯಾ ಹೇಳಿದೆ.

ನಡೆದ ಈ ಘಟನೆಯ ಬೆನ್ನಲ್ಲೇ ಇಸ್ರೇಲ್‌ ರಶ್ಯಾವನ್ನು ಸಂಪರ್ಕಿಸಿ ಅಲ್ಲಿರುವ ತನ್ನ ನಾಗರಿಕರ ರಕ್ಷಣೆಗೆ ಕೋರಿತು. ಈ ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಗವರ್ನರ್‌ ಅವರು ಇಸ್ರೇಲ್‌ಗೆ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News