×
Ad

ಪಾಕ್‍ಗೆ ಯುದ್ಧ ವಿಮಾನ ಇಂಜಿನ್ ಪೂರೈಕೆ ವರದಿ ನಿರಾಕರಿಸಿದ ರಶ್ಯ

Update: 2025-10-05 21:58 IST

Photo Credit : x \ INDIANS

ಮಾಸ್ಕೋ, ಅ.5: ಪಾಕಿಸ್ತಾನಕ್ಕೆ ಆರ್‌ಡಿ-93ಎಂಎ ಯುದ್ಧ ವಿಮಾನ ಇಂಜಿನ್‍ಗಳನ್ನು ಪೂರೈಸುವ ಯಾವುದೇ ಯೋಜನೆಗಳಿಲ್ಲ ಎಂದು ರಶ್ಯ ರವಿವಾರ ಸ್ಪಷ್ಟಪಡಿಸಿದ್ದು ಈ ಕುರಿತ ಮಾಧ್ಯಮ ವರದಿಯನ್ನು ನಿರಾಕರಿಸಿದೆ.

ಈ ರೀತಿಯ ಬೆಳವಣಿಗೆಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಭಾರತ ಮತ್ತು ರಶ್ಯದ ನಡುವೆ ಮುಂಬರುವ ದಿನಗಳಲ್ಲಿ ದೊಡ್ಡ ಒಪ್ಪಂದಗಳ ಸಾಧ್ಯತೆಯನ್ನು ಗಮನಿಸಿ ಈ ರೀತಿಯ ತರ್ಕಹೀನ ಊಹಾಪೋಹ ಹರಡಿರಬಹುದು. ಭಾರತಕ್ಕೆ ಅನಾನುಕೂಲ ಉಂಟು ಮಾಡುವಂತಹ ಮಟ್ಟದ ಸಹಕಾರವನ್ನು ಪಾಕಿಸ್ತಾನದ ಜೊತೆ ಹೊಂದಿಲ್ಲ ಎಂದು ರಶ್ಯದ ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ರಶ್ಯವು ಚೀನಾ ನಿರ್ಮಿತ ಜೆಫ್-17 ಯುದ್ಧ ವಿಮಾನಗಳ ಇಂಜಿನ್‍ಗಳನ್ನು ಪಾಕಿಸ್ತಾನಕ್ಕೆ ಪೂರೈಸುವ ಒಪ್ಪಂದ ಮಾಡಿಕೊಂಡಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News