×
Ad

ಉಕ್ರೇನ್ ಮೇಲೆ ಡ್ರೋನ್, ಕ್ಷಿಪಣಿ ಮಳೆಗರೆದ ರಶ್ಯ: ಇಬ್ಬರು ಮೃತ್ಯು

Update: 2025-07-21 21:44 IST

ಸಾಂದರ್ಭಿಕ ಚಿತ್ರ - AI

ಕೀವ್, ಜು.21: ರವಿವಾರ ರಾತ್ರಿಯಿಂದ ಉಕ್ರೇನ್ ಮೇಲೆ ರಶ್ಯವು ಡ್ರೋನ್ ಮತ್ತು ಕ್ಷಿಪಣಿಗಳ ಸುರಿಮಳೆಗರೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇತರ 7 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಾದ್ಯಂತ 426 ಡ್ರೋನ್‍ಗಳು ಹಾಗೂ 24 ಕ್ಷಿಪಣಿಗಳ ಮೂಲಕ ರಶ್ಯ ಪಡೆ ದಾಳಿ ನಡೆಸಿದ್ದು ರಾಜಧಾನಿ ಕೀವ್‌ ನಲ್ಲಿ ಹಲವು ಬಹುಮಹಡಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೀವ್‌ ನ ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದ್ದು ರೈಲ್ವೇ ಸ್ಟೇಷನ್, ಅಂಗಡಿಗಳು, ಮನೆಗಳು ಹಾಗೂ ಶಿಶುವಿಹಾರದ ಕಟ್ಟಡಕ್ಕೆ ಹಾನಿಯಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ತಂಡದ ಕಾರ್ಯಾಚರಣೆ ಮುಂದುವರಿದಿದೆ ಎಂದು ಕೀವ್ ನಗರದ ಮೇಯರ್ ವಿಟಾಲಿ ಕ್ಲಿಷ್ಕೊರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

ಇವಾನೊ-ಫ್ರಾಂಕಿವ್ಸ್ಕ್ ನಗರದ ಮೇಲೆ ನಡೆದ ದಾಳಿಯಲ್ಲಿ ಮಗು ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಉಕ್ರೇನ್ ನ 2ನೇ ದೊಡ್ಡ ನಗರ ಖಾರ್ಕಿವ್‌ ನಲ್ಲಿ ರವಿವಾರ ತಡರಾತ್ರಿ ರಶ್ಯ 12 ಡ್ರೋನ್‍ಗಳನ್ನು ಪ್ರಯೋಗಿಸಿದ್ದು ಕೈಗಾರಿಕೆಯೊಂದಕ್ಕೆ ವ್ಯಾಪಕ ಹಾನಿಯಾಗಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ಮೇಯರ್ ಇಹೊರ್ ಟೆರೆಖೊವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News