ಕೀವ್ ಮೇಲೆ ರಶ್ಯದ ಕ್ಷಿಪಣಿ ದಾಳಿ | ನಾಲ್ವರು ಉಕ್ರೇನ್ ನಾಗರಿಕರ ಸಾವು
Update: 2025-01-18 22:57 IST
PC : aljazeera.com
ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.
ದಾಳಿಗೆ ಕೆಲವೇ ತಾಸುಗಳ ಮುನ್ನ ಕೀವ್‌ನ ಮೇಯರ್ ವಿಟಾಲಿ ಕ್ಲಿಟ್ಸ್‌ಚಕೊ ಅವರು, ರಶ್ಯನ್ ಪಡೆಗಳಿಂದ ನಗರದ ಮೇಲೆ ಪ್ರಕ್ಷೇಪಕ ಕ್ಷಿಪಣಿಯ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು.
ಇತ್ತೀಚಿನ ತಿಂಗಳುಗಳಲ್ಲಿ ರಶ್ಯದ ಇಂಧನ ಹಾಗೂ ಸೇನಾ ಸ್ಥಾವರಳ ಮೇಲೆ ಯುಕ್ರೇನ್ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿರುವ ನಡುವೆ ಕೀವ್ ಮೇಲೆ ರಶ್ಯ ಆಕ್ರಮಣ ನಡೆಸಿದೆ.