ಉಕ್ರೇನ್ ನ ಮತ್ತೊಂದು ನಗರ ರಶ್ಯಾದ ವಶಕ್ಕೆ: ವರದಿ
Update: 2025-02-08 21:36 IST
ಸಾಂದರ್ಭಿಕ ಚಿತ್ರ | PC : NDTV
ಕೀವ್: ಹಲವು ತಿಂಗಳು ನಡೆದ ಯುದ್ಧದ ಬಳಿಕ ಆಯಕಟ್ಟಿನ ಪ್ರದೇಶವಾದ ಪೂರ್ವ ಉಕ್ರೇನ್ ನ ಟೊರೆಟ್ಸ್ಕ್ ನಗರವನ್ನು ತನ್ನ ಪಡೆಗಳು ವಶಪಡಿಸಿಕೊಂಡಿವೆ ಎಂದು ರಶ್ಯ ಶುಕ್ರವಾರ ಹೇಳಿದೆ.
ಪೂರ್ವ ಡೊನೆಟ್ಸ್ಕ್ ಪ್ರದೇಶದ ಕೈಗಾರಿಕಾ ಕೇಂದ್ರವಾಗಿರುವ ಟೊರೆಟ್ಸ್ಕ್ ನಗರವನ್ನು ವಶಪಡಿಸಿಕೊಂಡಿರುವುದು ಉಕ್ರೇನ್ ನ ಪ್ರಮುಖ ಪೂರೈಕೆ ಮಾರ್ಗವನ್ನು ತಡೆಯಲು ರಶ್ಯಕ್ಕೆ ಅನುಕೂಲವಾಗಲಿದೆ. ನಿರಂತರ ಹಾಗೂ ಸಕ್ರಿಯ ಕಾರ್ಯಾಚರಣೆಯ ಫಲವಾಗಿ ಟೊರೆಟ್ಸ್ಕ್ ನಗರವನ್ನು ಶತ್ರುಗಳಿಂದ(ಉಕ್ರೇನ್‍ನಿಂದ) ಸ್ವತಂತ್ರಗೊಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.
2022ರಲ್ಲಿ ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಆರಂಭವಾಗುವುದಕ್ಕೂ ಮುನ್ನ ಟೊರೆಟ್ಸ್ಕ್‍ನಲ್ಲಿ ಸುಮಾರು 30,000 ಜನಸಂಖ್ಯೆಯಿತ್ತು. ಆದರೆ ಪ್ರತೀ ದಿನ ನಡೆಯುತ್ತಿರುವ ಬಾಂಬ್‍ದಾಳಿಯಿಂದಾಗಿ ಸುಮಾರು 90%ದಷ್ಟು ಜನರು ನಗರದಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.