ರಶ್ಯ | ನವಾಲ್ನಿ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾದ್ರಿ ಅಮಾನತು
Update: 2024-04-24 22:44 IST
ನವಾಲ್ನಿ | Photo: hindustantimes.com
ಮಾಸ್ಕೋ: ಕಳೆದ ಫೆಬ್ರವರಿಯಲ್ಲಿ ಜೈಲಿನಲ್ಲಿ ಮೃತಪಟ್ಟಿದ್ದ ರಶ್ಯದ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಯ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ರಶ್ಯದ ಆರ್ಥಡಾಕ್ಸ್ ಚರ್ಚ್‍ನ ಧರ್ಮಗುರು(ಪಾದ್ರಿ)ವನ್ನು 3 ವರ್ಷ ಧಾರ್ಮಿಕ ಕರ್ತವ್ಯದಿಂದ ಅಮಾನತುಗೊಳಿಸಿರುವುದಾಗಿ ರಶ್ಯ ಆರ್ಥಡಾಕ್ಸ್ ಚರ್ಚ್‍ನ ಮಾಸ್ಕೋ ಧರ್ಮಪ್ರಾಂತ್ಯ ಹೇಳಿದೆ.
ಪಾದ್ರಿ ಡಿಮಿಟ್ರಿ ಸಫ್ರೊನೊವ್‍ರನ್ನು ಆಶೀರ್ವಚನ ನೀಡುವ ಕಾರ್ಯದಿಂದ ಮತ್ತು ಚರ್ಚ್ ಪಾದ್ರಿಯ ಕ್ರಾಸ್ ಧರಿಸುವುದಕ್ಕೆ 2027ರವರೆಗೆ ನಿರ್ಬಂಧಿಸಲಾಗಿದೆ. ಜತೆಗೆ ಅವರನ್ನು ಮಾಸ್ಕೋದ ಮತ್ತೊಂದು ಚರ್ಚ್‍ಗೆ ವರ್ಗಾಯಿಸಿದ್ದು ಬೇರೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಅಮಾನತು ಅವಧಿಯಲ್ಲಿ ಅವರ ವರ್ತನೆಯನ್ನು ಆಧರಿಸಿ ಪಾದ್ರಿಯ ಸ್ಥಾನಮಾನ ಮರುಸ್ಥಾಪಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಧರ್ಮಪ್ರಾಂತ್ಯದ ಹೇಳಿಕೆ ತಿಳಿಸಿದೆ.