×
Ad

ಉಕ್ರೇನ್ ಮೇಲೆ ರಶ್ಯದ ಕ್ಷಿಪಣಿ ದಾಳಿ: ಓರ್ವ ಮೃತ್ಯು, 3 ಮಂದಿಗೆ ಗಾಯ

Update: 2025-02-12 22:45 IST

ಸಾಂದರ್ಭಿಕ ಚಿತ್ರ | PTI

ಕೀವ್: ಉಕ್ರೇನ್ ರಾಜಧಾನಿ ಕೀವ್ ನಗರ ಹಾಗೂ ಸುತ್ತಮುತ್ತಲ ಪ್ರದೇಶದ ಮೇಲೆ ಬುಧವಾರ ಬೆಳಿಗ್ಗೆ ರಶ್ಯ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದು 9 ವರ್ಷದ ಮಗು ಸೇರಿದಂತೆ ಮೂವರು ಗಾಯಗೊಂಡಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

`ದಾಳಿಯಿಂದಾಗಿ ನಗರದಾದ್ಯಂತ ಹಲವಾರು ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ತುರ್ತು ಕಾರ್ಯಪಡೆ ಸಿಬ್ಬಂದಿಯನ್ನು ಕರೆಸಲಾಗಿದೆ. ವ್ಲಾದಿಮಿರ್ ಪುಟಿನ್ ಯುದ್ಧ ಕೊನೆಗೊಳ್ಳಬೇಕೆಂದು ಬಯಸಿದ್ದು ಹೀಗೆ' ಎಂದು ಸೇನಾಧಿಕಾರಿ ಆಂಡ್ರಿಯ್ ಯೆರ್ಮಾಕ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾನು ರಶ್ಯ ಮತ್ತು ಉಕ್ರೇನ್ ಅಧ್ಯಕ್ಷರ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬಳಿಕ ಸುಮಾರು 3 ವರ್ಷದ ಹಿಂದೆ ಉಕ್ರೇನ್‍ನಲ್ಲಿ ರಶ್ಯ ಪ್ರಾರಂಭಿಸಿದ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಮಾತುಕತೆಗಳ ಪುನರಾರಂಭದ ನಿರೀಕ್ಷೆ ಹೆಚ್ಚಿದೆ. ಉಕ್ರೇನ್ ಶೀಘ್ರವೇ ಅಮೆರಿಕದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಮಂಗಳವಾರ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News