×
Ad

2023ರಲ್ಲಿ ಕುರ್ ಆನ್ ಅನ್ನು ಸುಟ್ಟಿದ್ದ ಸಲ್ವಾನ್ ಮೋಮಿಕಾ ಸ್ವೀಡನ್ ನಲ್ಲಿ ಗುಂಡೇಟಿಗೆ ಬಲಿ

Update: 2025-01-30 19:59 IST

 ಸಲ್ವಾನ್ ಮೋಮಿಕಾ | PC :  NDTV 

ಸ್ಟಾಕ್ ಹಾಮ್: 2023ರಲ್ಲಿ ಪದೇ ಪದೇ ಕುರ್ ಆನ್ ಅನ್ನು ಸುಡುವ ಮೂಲಕ, ಮುಸ್ಲಿಂ ರಾಷ್ಟ್ರಗಳಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಸಲ್ವಾನ್ ಮೋಮಿಕಾರನ್ನು ಸ್ವೀಡನ್ ನಲ್ಲಿ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಗುರುವಾರ ಮಾಧ್ಯಮಗಳು ವರದಿ ಮಾಡಿವೆ.

ಕುರ್ ಆನ್ ಅನ್ನು ಸುಡುವ ಮೂಲಕ ಭಾರಿ ಪ್ರತಿಭಟನೆಗೆ ಕಾರಣವಾಗಿದ್ದ ಕ್ರಿಶ್ಚಿಯನ್ ಸಮುದಾಯದ ಸಲ್ವಾನ್ ಮೋಮಿಕಾ ಜನಾಂಗೀಯ ಹಿಂಸಾಚಾರ ಪ್ರಚೋದನೆಯಲ್ಲಿ ದೋಷಿಯೇ ಎಂಬ ಕುರಿತು ಗುರುವಾರ ಸ್ಟಾಕ್ ಹಾಮ್ ನ್ಯಾಯಾಲಯವೊಂದು ತೀರ್ಪು ನೀಡುವುದಿತ್ತು.

ಆದರೆ, “ಸಲ್ವಾನ್ ಮೋಮಿಕಾ ಮೃತಪಟ್ಟಿರುವುದರಿಂದ, ತೀರ್ಪು ನೀಡಲು ಇನ್ನೂ ಸಾಕಷ್ಟು ಸಮಯಾವಕಾಶ ಬೇಕಿರುವುದರಿಂದ, ತೀರ್ಪನ್ನು ಫೆಬ್ರವರಿ 3ರವರೆಗೆ ಮುಂದೂಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಮೋಮಿಕಾ ವಾಸಿಸುತ್ತಿದ್ದ ಸೊಡರ್ ತಾಲ್ಜೆ ನಗರದಲ್ಲಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದೆವು ಎಂದು ಪ್ರಕಟನೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

“ಮನೆಯೊಳಗೆ ಗುಂಡಿನ ದಾಳಿ ನಡೆದಿದ್ದು, ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಗುಂಡೇಟಿಗೆ ಗುರಿಯಾಗಿರುವ ವ್ಯಕ್ತಿಯೊಬ್ಬ ಕಂಡು ಬಂದಿದ್ದಾನೆ. ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಪೊಲೀಸ್ ಪ್ರಕಟನೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News