×
Ad

2034 ರ ಫಿಫಾ ವಿಶ್ವಕಪ್‌ ಗೆ ಮುನ್ನ ಮದ್ಯ ನಿಷೇಧ ತೆರವುಗೊಳಿಸುವ ವರದಿ ನಿರಾಕರಿಸಿದ ಸೌದಿ ಅಧಿಕಾರಿಗಳು

Update: 2025-05-27 12:51 IST

ಸಾಂದರ್ಭಿಕ ಚಿತ್ರ (Credit; Grok)

ರಿಯಾದ್: 70 ವರ್ಷಗಳಿಗೂ ಹೆಚ್ಚು ಕಾಲ ಸೌದಿ ಅರೇಬಿಯಾದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧವನ್ನು ತೆಗೆದುಹಾಕುವ ವರದಿಗಳನ್ನು ಸೌದಿ ಅರೇಬಿಯಾದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

2034 ರ ಫಿಫಾ ವಿಶ್ವಕಪ್ ಅನ್ನು ಆಯೋಜಿಸುವ ನಿರೀಕ್ಷೆಯಲ್ಲಿರುವ ಸೌದಿ ಅರೇಬಿಯಾವು ಈಗಾಗಲೇ ನಿಷೇಧಿಸಲಾಗಿರುವ ಮದ್ಯ ಮಾರಾಟಕ್ಕೆ ಅನುಮತಿ ನೀಡಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಸುದ್ದಿಯ ಮೂಲದ ಕುರಿತು ಮಾಹಿತಿ ನೀಡಲಾಗಿರಲಿಲ್ಲ.

ವೈರಲ್ ಆದ ಈ ಸುದ್ದಿಯು ಇಸ್ಲಾಂನ ಅತ್ಯಂತ ಗೌರವಾನ್ವಿತ ತಾಣಗಳಾದ ಮಕ್ಕಾ ಮತ್ತು ಮದೀನಾಗಳಿಗೆ ನೆಲೆಯಾಗಿರುವ ಸೌದಿ ಅರೇಬಿಯಾದ ಬಗ್ಗೆ ಜನರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿತ್ತು.

ಗಲ್ಫ್ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾ ಮತ್ತು ಕುವೈತ್ ನಲ್ಲಿ ಮಾತ್ರ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕಳೆದ ವರ್ಷ ರಿಯಾದ್‌ನಲ್ಲಿ ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾತ್ರ ಸೇವೆ ನೀಡುವ ಮೊದಲ ಮದ್ಯದ ಅಂಗಡಿಯನ್ನು ತೆರೆಯಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News