ಸಾವಿರಾರು ಸಂಖ್ಯೆಯಲ್ಲಿ ಶೇಖ್ ಹಸೀನಾ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು
Update: 2024-08-05 15:29 IST
screengrab:X/@Tamal0401
ಢಾಕಾ: ಸಾವಿರಾರು ಪ್ರತಿಭಟನಾಕಾರರು ಢಾಕಾದಲ್ಲಿರುವ ಶೇಖ್ ಹಸೀನಾ ಅವರ ನಿವಾಸಕ್ಕೆ ನುಗ್ಗಿದ್ದು, ರಾಜೀನಾಮೆಯನ್ನು ಈಗಾಗಲೇ ನೀಡಿರುವ ಹಸೀನಾ ಅವರು ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆಂಬ ಸುದ್ದಿಯಿದ್ದು ಅವರನ್ನು ಹೊತ್ತೊಯ್ದಿರುವ ಮಿಲಿಟರಿ ಹೆಲಿಕಾಪ್ಟರ್ ಭಾರತದತ್ತ ಸಾಗುತ್ತಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಮತ್ತು ಇತರ ರಾಜಕೀಯ ಮುಖಂಡರ ನಡುವೆ ಮಾತುಕತೆಗಳು ನಡೆದ ಬೆಳವಣಿಗೆಯ ನಂತರ ಶೇಖ್ ಹಸೀನಾ ತಮ್ಮ ಅರಮನೆ ತೊರೆದು ದೇಶವನ್ನೂ ತೊರೆಯುತ್ತಿದ್ದಾರೆಂದು ತಿಳಿದು ಬಂದಿದೆ.
ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆಂದು ತಿಳಿದು ಬಂದಿದೆ.
ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.