×
Ad

ದಕ್ಷಿಣ ಕೊರಿಯ | ವಿಮಾನ ಪತನಕ್ಕೂ ಮುನ್ನ ಹಕ್ಕಿಗಳ ದಾಳಿ : ಪೈಲಟ್ ಹೇಳಿಕೆ

Update: 2024-12-30 10:55 IST

Photo : PTI

ಸಿಯೋಲ್: ವಿಮಾನವು ರವಿವಾರ ಅಪಘಾತಕ್ಕೀಡಾಗುವ ಸ್ವಲ್ಪ ಸಮಯದ ಮೊದಲು ವಿಮಾನವು ಹಕ್ಕಿಗಳ ದಾಳಿಗೆ ಒಳಗಾಗಿತ್ತು ಎಂದು ಜೆಜು ಏರ್ ಜೆಟ್ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ತಿಳಿಸಿದ್ದಾರೆ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದಕ್ಷಿಣ ಕೊರಿಯದಲ್ಲಿ ರವಿವಾರ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತದಲ್ಲಿ 179 ಜನರು ಮೃತಪಟ್ಟರು. ಲ್ಯಾಂಡಿಂಗ್ ಗೇರ್ ವಿಫಲಗೊಂಡಿದ್ದರಿಂದ ಬೆಲ್ಲಿ ಲ್ಯಾಂಡಿಂಗ್ ಮಾಡಿದ ವಿಮಾನವು ರನ್‌ವೇಯ ತುದಿಯಿಂದ ಸ್ಕಿಡ್ ಆಗಿ, ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗೋಡೆಗೆ ಅಪ್ಪಳಿಸಿ ಬೆಂಕಿಯ ಚೆಂಡಿನಂತೆ ಉರಿದು ಪತನವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News