×
Ad

ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್‍ ಸುಕ್ ಯಿಯೋಲ್‍ಗೆ 5 ವರ್ಷ ಜೈಲುಶಿಕ್ಷೆ

Update: 2026-01-16 22:07 IST

ಯೂನ್ ಸುಕ್ ಯಿಯೋಲ್‍ | Photo Credit : AP \ PTI 

ಸಿಯೋಲ್, ಜ.16: ದೇಶದಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದಕ್ಷಿಣ ಕೊರಿಯಾದ ನ್ಯಾಯಾಲಯ ಶುಕ್ರವಾರ ಮಾಜಿ ಅಧ್ಯಕ್ಷ ಯೂನ್ ಸುಕ್ ಯಿಯೋಲ್‍ಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.

2024ರ ಡಿಸೆಂಬರ್‌ನಲ್ಲಿ ಮಿಲಿಟರಿ ಕಾನೂನು ಜಾರಿಗೊಳಿಸುವ ಆದೇಶ ಸೇರಿದಂತೆ ಯೂನ್ ವಿರುದ್ದ ದಾಖಲಾಗಿರುವ 8 ಪ್ರಕರಣಗಳಲ್ಲಿ ಮೊದಲ ತೀರ್ಪು ಇದಾಗಿದೆ. ಮಿಲಿಟರಿ ಕಾನೂನು ಜಾರಿಗೊಳಿಸುವ ಆದೇಶದ ಮೂಲಕ ದಂಗೆಯ ನೇತೃತ್ವ ವಹಿಸಿದ್ದಾರೆ ಎಂಬ ಪ್ರಮುಖ ಆರೋಪವನ್ನೂ ಯೂನ್ ಎದುರಿಸುತ್ತಿದ್ದು ಆರೋಪ ಸಾಬೀತಾದರೆ ಮರಣದಂಡನೆ ವಿಧಿಸಲು ಅವಕಾಶವಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News