ಗಾಝಾ ಶಾಂತಿ ಮಂಡಳಿ ರಚನೆ: ಟ್ರಂಪ್ ಘೋಷಣೆ
Update: 2026-01-16 22:09 IST
ಡೊನಾಲ್ಡ್ ಟ್ರಂಪ್ | Photo Credit : PTI \ AP
ವಾಷಿಂಗ್ಟನ್, ಜ.16: ಗಾಝಾ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 20 ಅಂಶದ ಯೋಜನೆಯ ಎರಡನೇ ಹಂತವನ್ನು ಪ್ರಾರಂಭಿಸುವುದಾಗಿ ಅಮೆರಿಕಾ ಅಧ್ಯಕ್ಷರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಘೋಷಿಸಿದ್ದಾರೆ.
ಗಾಝಾ ಶಾಂತಿ ಮಂಡಳಿಯ ರಚನೆಯನ್ನು ಟ್ರಂಪ್ ಘೋಷಿಸಿದ್ದು ಅದರ ಸದಸ್ಯರನ್ನು ಶೀಘ್ರವೇ ಹೆಸರಿಸುವುದಾಗಿ ಹೇಳಿದ್ದಾರೆ.
ಎರಡನೇ ಹಂತವು `ನಿರಸ್ತ್ರೀಕರಣ, ತಾಂತ್ರಿಕ ಆಡಳಿತ ಮತ್ತು ಗಾಝಾದ ಪುನರ್ನಿರ್ಮಾಣ'ವನ್ನು ಒಳಗೊಂಡಿದೆ. `ಎರಡನೇ ಹಂತವು ಗಾಝಾದ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿಯ ರಚನೆಯನ್ನು ಹೊಂದಿದೆ. ಇದು ಪರಿವರ್ತನೆಯ ಅವಧಿಯಲ್ಲಿ ಆಡಳಿತವನ್ನು ಮೇಲ್ವಿಚಾರಣೆ ಮಾಡುತ್ತದೆ. ಹಮಾಸ್ ತನ್ನ ಬಾಧ್ಯತೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ಅಮೆರಿಕಾ ನಿರೀಕ್ಷಿಸುತ್ತದೆ. ಇದಕ್ಕೆ ವಿಫಲವಾದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ' ಎಂದು ವಿಟ್ಕಾಫ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.