×
Ad

ಯೆಮನ್ ಪ್ರಧಾನಿ ಸಾಲಿಂ ಸಾಲಿಹ್ ಬಿನ್‌ ಬ್ರೈಕ್‌ ರಾಜೀನಾಮೆ

Update: 2026-01-16 21:58 IST

ಶಾಯ ಮುಹ್ಸಿನ್ ಝಿಂದಾನಿ | Photo Credit : aljazeera.com 

ಸನಾ, ಜ.16: ಯೆಮನ್ ಪ್ರಧಾನಿ ಸಾಲಿಂ ಸಾಲಿಹ್ ಬಿನ್‌ ಬ್ರೈಕ್‌ ತನ್ನ ಸರಕಾರದ ರಾಜೀನಾಮೆಯನ್ನು ಸಲ್ಲಿಸಿದ್ದು ವಿದೇಶಾಂಗ ಸಚಿವರನ್ನು ನೂತನ ಪ್ರಧಾನಿಯಾಗಿ ನೇಮಿಸಿರುವುದಾಗಿ ವರದಿಯಾಗಿದೆ.

ಸೌದಿ ಅರೆಬಿಯಾ ಬೆಂಬಲಿತ ` ಅಧ್ಯಕ್ಷೀಯ ನಾಯಕತ್ವ ಮಂಡಳಿ'ಯ ಮುಖ್ಯಸ್ಥರನ್ನು ಭೇಟಿಮಾಡಿದ ಸಾಲಿಂ ಸಾಲಿಹ್ ಬಿನ್‌ ಬ್ರೈಕ್‌ ಸರಕಾರದ ರಾಜೀನಾಮೆ ಸಲ್ಲಿಸಿದ್ದು ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದೇಶಾಂಗ ಸಚಿವ ಡಾ. ಶಾಯ ಮುಹ್ಸಿನ್ ಝಿಂದಾನಿ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಲಾಗಿದ್ದು ಸರಕಾರ ರಚಿಸುವ ಕಾರ್ಯವನ್ನು ವಹಿಸಲಾಗಿದೆ' ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News