×
Ad

ಅತ್ಯಾಚಾರ ಆರೋಪ; ನೇಪಾಳದ `ಬುದ್ಧ ಬಾಲಕ'ನ ಬಂಧನ

Update: 2024-01-10 23:07 IST

ಕಠ್ಮಂಡು : ನೇಪಾಳದ `ಬುದ್ಧ ಬಾಲಕ'ನೆಂದೇ ಹೆಸರಾಗಿರುವ ರಾಮ್ ಬಹಾದೂರ್ ಬೊಮ್ಜಾನ್‍ನನ್ನು ಅತ್ಯಾಚಾರ ಆರೋಪದಲ್ಲಿ ಬಂಧಿಸಿರುವುದಾಗಿ ನೇಪಾಳಿ ಪೊಲೀಸರು ಬುಧವಾರ ಹೇಳಿದ್ದಾರೆ.

ವಿವಾದಾತ್ಮಕ ಆಧ್ಯಾತ್ಮಿಕ ಗುರು ಬೊಮ್ಜಾನ್ ನಿವಾಸದಿಂದ 30 ದಶಲಕ್ಷಕ್ಕೂ ಅಧಿಕ ರೂಪಾಯಿ(ನೇಪಾಳಿ ರೂಪಾಯಿ)ಗಳನ್ನು ವಶಕ್ಕೆ ಪಡೆಯಲಾಗಿದೆ. ಬುದ್ಧನ ಪುನರ್ಜನ್ಮ ಎಂದು ಅನುಯಾಯಿಗಳು ನಂಬಿರುವ 33 ವರ್ಷದ ಬೊಮ್ಜಾನ್ 2016ರ ಆಗಸ್ಟ್‍ನಲ್ಲಿ ತನ್ನ ಆಶ್ರಮದಲ್ಲಿ ನನ್(ಸನ್ಯಾಸಿನಿ) ಆಗಿದ್ದ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದು ಕೆಲವು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಮಂಗಳವಾರ ಪಥಾರ್‍ಕೋಟ್‍ನ ಆಶ್ರಮದಿಂದ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News