×
Ad

ಫೆಲೆಸ್ತೀನ್ ಮಿಲಿಟರಿಗೆ ಬೆಂಬಲ: ಅಲ್ಜೀರಿಯಾ ಸಂಸತ್ತಿನ ಒಪ್ಪಿಗೆ

Update: 2023-11-05 17:02 IST

Photo- PTI

ಅಲ್ಜೀರ್ಸ್: ಗಾಝಾ-ಇಸ್ರೇಲ್ ಯುದ್ಧದಲ್ಲಿ ಪ್ರವೇಶಿಸಲು ಮತ್ತು ಫೆಲೆಸ್ತೀನ್ ಅನ್ನು ಬೆಂಬಲಿಸಲು ಅಧ್ಯಕ್ಷ ಅಬ್ದುಲ್ ಮಜೀದ್ ತಬೂನ್ ಅವರಿಗೆ ಅಧಿಕಾರ ನೀಡುವ ನಿರ್ಣಯವನ್ನು ಅಲ್ಜೀರಿಯಾ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ. ಫ್ರೆಂಚ್ ವಸಾಹತುಶಾಹಿ ವಿರುದ್ಧ ಅಲ್ಜೀರಿಯಾದ ಸ್ವಾತಂತ್ರ್ಯ ಯುದ್ಧದ ವಾರ್ಷಿಕೋತ್ಸವದ ಮರುದಿನವಾದ ನ.೨ರಂದು ಅಂಗೀಕರಿಸಲಾದ ನಿರ್ಣಯದ ಪರವಾಗಿ ನೂರಕ್ಕೆ ನೂರು ಮತಗಳು ಬಿದ್ದಿದ್ದವು ಎಂದು ವರದಿಯಾಗಿದೆ.

ಅಲ್ಜೀರಿಯಾ ಇಸ್ರೇಲ್ ವಿರುದ್ಧ ಯುದ್ಧರಂಗಕ್ಕೆ ಇಳಿಯಲು ಉತ್ಸುಕವಾಗಿರುವ ಎರಡನೇ ಅರಬ್ ದೇಶವಾಗಿದೆ. ಎರಡು ದಿನಗಳ ಹಿಂದಷ್ಟೇ ಯೆಮೆನ್ ಇಸ್ರೇಲ್ ವಿರುದ್ಧ ಯುದ್ಧವನ್ನು ಘೋಷಿಸಿತ್ತು.

ʼಫೆಲೆಸ್ತೀನ್ ಆಕ್ರಮಿತ ಪ್ರದೇಶಗಳಲ್ಲಿಯ ಝಿಯೊನಿಸ್ಟ್ ವೈರಿಯನ್ನು ಗುರಿಯಾಗಿಸಿಕೊಂಡು ವಿವಿಧೆಡೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಕ್ಷಿಪಣಿ ದಾಳಿಗಳನ್ನು ನಡೆಸಿದ್ದೇವೆ. ತುಳಿತಕ್ಕೊಳಗಾಗಿರುವ ನಮ್ಮ ಸೋದರರ ಬೆಂಬಲಕ್ಕಾಗಿ ಇದು ಮೂರನೇ ಕಾರ್ಯಾಚರಣೆಯಾಗಿದೆ’ ಎಂದು ಯೆಮೆನಿ ಸಶಸ್ತ್ರ ಪಡೆಗಳ ವಕ್ತಾರ ಜನರಲ್ ಯಾಹ್ಯಾ ಸಾರೀ ಈ ವಾರದ ಪೂರ್ವಾರ್ಧದಲ್ಲಿ ಹೇಳಿದ್ದರು.

‘ಫೆಲೆಸ್ತೀನ್ ಹೋರಾಟ ಕುರಿತಂತೆ ಯೆಮೆನಿ ಜನತೆಯ ನಿಲುವು ಸ್ಥಿರವಾಗಿದೆ ಮತ್ತು ತತ್ವ ಬದ್ಧವಾಗಿದೆ. ಫೆಲೆಸ್ತೀನಿಗಳು ತಮ್ಮನ್ನು ರಕ್ಷಿಸಿಕೊಳ್ಳುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ. ಗಾಝಾವನ್ನು ಬೆಂಬಲಿಸುವಲ್ಲಿ ನಮ್ಮ ಪಡೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿವೆ’ ಎಂದೂ ಸಾರೀ ಹೇಳಿದ್ದರು.

ಅರಬ್ ದೇಶಗಳು ಫೆಲೆಸ್ತೀನ ಶಾಂತಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿವೆ. ಇಸ್ರೇಲಿ ಆಕ್ರಮಣವನ್ನು ಕುವೈತ್ ಖಂಡಿಸಿದ್ದರೆ, ಬಹ್ರೈನ್ ಇಸ್ರೇಲ್ ನೊಂದಿಗೆ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ. ಜೋರ್ಡಾನ್ ಇಸ್ರೇಲ್ ನಲ್ಲಿಯ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ.

ಫೆಲೆಸ್ತೀನ್ ಗೆ ಬೆಂಬಲವನ್ನು ವ್ಯಕ್ತಪಡಿಸಿರುವ ಪಶ್ಚಿಮ ಏಶ್ಯಾದ ಹೊರಗಿನ ದೇಶಗಳಲ್ಲಿ ಕ್ಯೂಬಾ, ಚಿಲಿ, ವೆನೆಝುವೆಲಾ ಮತ್ತು ಬೊಲಿವಿಯಾ ಇಸ್ರೇಲ್ ನೊಂದಿಗೆ ತಮ್ಮ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿವೆ. ನಿಕಾರಾಗುವಾ ಮತ್ತು ಇತರ ದೇಶಗಳೂ ಫೆಲೆಸ್ತೀನ್ ಅನ್ನು ಬೆಂಬಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News