ಉಸ್ಮಾನ್ ಹಾದಿ ಹತ್ಯೆಯ ಶಂಕಿತ ಆರೋಪಿ ದುಬೈಯಲ್ಲಿ: ವರದಿ
Update: 2025-12-31 22:05 IST
Photo Credit : NDTV
ದುಬೈ, ಡಿ.31: ಢಾಕಾದಲ್ಲಿ ಉಸ್ಮಾನ್ ಹಾದಿಯನ್ನು ಗುಂಡಿಕ್ಕಿ ಹತ್ಯೆಗೈದ ಶಂಕಿತ ಆರೋಪಿ ಫೈಸಲ್ ಕರೀಮ್ ಮಸೂದ್, ಹತ್ಯೆಯಲ್ಲಿ ತಾನು ಪಾಲ್ಗೊಂಡಿರುವುದನ್ನು ನಿರಾಕರಿಸಿದ್ದು, ತಾನು ಈಗ ದುಬೈಯಲ್ಲಿ ಇರುವುದಾಗಿ ಹೇಳಿದ್ದಾನೆ.
ಬುಧವಾರ ವೈರಲ್ ಆಗಿರುವ ವೀಡಿಯೊದಲ್ಲಿ ಮಸೂದ್, “ಹಾದಿಯ ಹತ್ಯೆಯಲ್ಲಿ ತನ್ನ ಪಾತ್ರವಿಲ್ಲ. ಆದರೆ ಇದರಲ್ಲಿ ತನ್ನನ್ನು ಸಿಲುಕಿಸಲು ಪ್ರಯತ್ನ ನಡೆಯುತ್ತಿರುವ ಮಾಹಿತಿ ಸಿಕ್ಕಿದ ತಕ್ಷಣ ಬಾಂಗ್ಲಾದಿಂದ ಪರಾರಿಯಾಗಿ ದುಬೈಗೆ ಆಗಮಿಸಿದ್ದೇನೆ. ಹಾದಿಯ ಹತ್ಯೆಯನ್ನು ಜಮಾತೆ ಇಸ್ಲಾಮಿ ಪಕ್ಷದ ಶಕ್ತಿಗಳು ನಡೆಸಿವೆ” ಎಂದು ಪ್ರತಿಪಾದಿಸಿದ್ದಾನೆ. ಹಾದಿಯನ್ನು ಹತ್ಯೆಗೈದ ಶಂಕಿತ ಆರೋಪಿಗಳು ಬಳಿಕ ಭಾರತಕ್ಕೆ ಪರಾರಿಯಾಗಿರುವುದಾಗಿ ಬಾಂಗ್ಲಾದೇಶದ ಪೊಲೀಸರು ಆರೋಪಿಸಿದ್ದರು.