×
Ad

40ಕ್ಕೂ ಅಧಿಕ ಮಹಿಳೆಯರನ್ನು ಹತ್ಯೆಗೈದಿದ್ದ ಸರಣಿ ಹಂತಕ ಜೈಲಿನಿಂದ ಪರಾರಿ!

Update: 2024-08-21 12:47 IST

ಕಾಲಿನ್ಸ್ ಜುಮೈಸಿ ಖಲುಶಾ (Photo credit:X/@FatuNetwork)

ನೈರೋಬಿ: ತನ್ನ ಪತ್ನಿ ಸಹಿತ 42 ಮಹಿಳೆಯರನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿ ಕ್ವಾರಿಗೆ ಎಸೆದ ಕೀನ್ಯಾದ ಸರಣಿ ಹಂತಕ ಕಾಲಿನ್ಸ್ ಜುಮೈಸಿ ಖಲುಶಾ ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಕೀನ್ಯಾವನ್ನು ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ 33 ವರ್ಷದ ಖಲುಶಾ ಆಗಸ್ಟ್ 19ರಂದು ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

9 ಮಹಿಳೆಯರ ಮೃತದೇಹಗಳು ನೈರೋಬಿಯ ಕ್ವಾರಿಯೊಂದರಲ್ಲಿ ಪತ್ತೆಯಾದ ಬಳಿಕ ಭಾರಿ ಕಾರ್ಯಾಚರಣೆ ನಡೆಸಿದ ಕೀನ್ಯಾ ಪೊಲೀಸರು ಜುಲೈ 16 ರಂದು ಖಲುಶಾನನ್ನು ಬಂಧಿಸಿದ್ದರು. ಆದರೆ ಈಗ ಆತ ಜೇಲಿನಿಂದ ಪರಾರಿಯಾಗಿದ್ದು, ನೈರೋಬಿ ಮಹಿಳೆಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪ್ರೇಮ ವೈಫಲ್ಯದ ಬಳಿಕ ಆತ ಮಹಿಳೆಯರಿಗೆ ಆಮಿಷ ತೋರಿಸಿ ನಂತರ ಅವರನ್ನು ಭೀಕರವಾಗಿ ಹತ್ಯೆಗೈದು ಕ್ವಾರಿಗೆ ಎಸೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸರಣಿ ಹಂತಕ ಜೈಲಿನಿಂದ ಪರಾರಿಯಾಗಿದ್ದಕ್ಕೆ ನ್ಯಾಯಾಲಯ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಭದ್ರತೆ ಇರುವ ಜೈಲಿನಿಂದ ಹಂತಕ ತಪ್ಪಿಸಿಕೊಂಡಿದ್ದು ಹೇಗೆ ಎಂದು ನ್ಯಾಯಾಧೀಶರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಪೊಲೀಸರು ಬಲವಂತದಿಂದ ತಪ್ಪನ್ನು ಒಪ್ಪಿಸಿದ್ದಾರೆ, ನನ್ನ ಕಕ್ಷಿದಾರ ತಪ್ಪು ಮಾಡಿಲ್ಲ ಎಂದು ಖಲುಶಾ ಪರ ವಕೀಲ ಹೇಳಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News