ಇಸ್ರೇಲ್ ದಾಳಿಯನ್ನು ಹಿಮ್ಮೆಟ್ಟಿಸಿದ ಸಿರಿಯಾ: ವರದಿ
Update: 2023-07-02 23:36 IST
Photo: NDTV.com
ದಮಾಸ್ಕಸ್: ಇಸ್ರೇಲ್ ನ ಕ್ಷಿಪಣಿ ದಾಳಿಯನ್ನು ಹಿಮ್ಮೆಟ್ಟಿಸಿರುವುದಾಗಿ ಸಿರಿಯಾ ರವಿವಾರ ಹೇಳಿದೆ. ಈ ಮಧ್ಯೆ, ಸಿರಿಯಾ ಉಡಾಯಿಸಿದ ಕ್ಷಿಪಣಿಯನ್ನು ತನ್ನ ಕ್ಷಿಪಣಿ ನಿರೋಧಕ ವ್ಯವಸ್ಥೆಯು ಆಗಸದಲ್ಲೇ ತುಂಡರಿಸಿದೆ ಎಂದು ಇಸ್ರೇಲ್ ಹೇಳಿದೆ.
ದೇಶದ ಕೇಂದ್ರ ಭಾಗಗಳಾದ್ಯಂತ ಇಸ್ರೇಲಿ ಕ್ಷಿಪಣಿಗಳನ್ನು ತನ್ನ ವಾಯುರಕ್ಷಣಾ ಪಡೆ ತಡೆಹಿಡಿದವು ಮತ್ತು ಅವುಗಳಲ್ಲಿ ಹೆಚ್ಚಿನವುಗಳನ್ನು ಹೊಡೆದುರುಳಿಸಿದೆ ಎಂದು ಸಿರಿಯಾ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ತನ್ನ ಯುದ್ಧವಿಮಾನಗಳು ಸಿರಿಯಾದ ವಾಯುರಕ್ಷಣಾ ವ್ಯವಸ್ಥೆಗೆ ಅಪ್ಪಳಿಸಿದೆ. ಇದರ ಮೂಲಕ ಸಿರಿಯಾವು ವಿಮಾನ ವಿರೋಧಿ ಕ್ಷಿಪಣಿಯನ್ನು ಉಡಾಯಿಸುತ್ತಿತ್ತು ಎಂದು ಇಸ್ರೇಲ್ ಮಿಲಿಟರಿಯ ವಕ್ತಾರರು ಹೇಳಿದ್ದಾರೆ.