×
Ad

ಪಾಕಿಸ್ತಾನ: ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆ ಹೊತ್ತ ತಾಲಿಬಾನ್

Update: 2025-06-29 22:32 IST

Photo : ndtv

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾದಲ್ಲಿ ಶನಿವಾರ ನಡೆದಿದ್ದ ಆತ್ಮಹತ್ಯಾ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನ್ ತಾಲಿಬಾನ್(ಟಿಪಿಪಿ) ವಹಿಸಿಕೊಂಡಿದೆ.

ಖೈಬರ್ ಪಖ್ತೂಂಕ್ವಾದ ವಝೀರಿಸ್ತಾನದಲ್ಲಿ ನಡೆದಿದ್ದ ದಾಳಿಗೆ ಪಾಕಿಸ್ತಾನವು ಭಾರತವನ್ನು ದೂಷಿಸಿತ್ತು. ಆದರೆ ಟಿಟಿಪಿಯ ಒಂದು ಬಣ `ಹಫೀಝ್ ಗುಲ್ ಬಹಾದುರ್' ಸಶಸ್ತ್ರ ಗುಂಪು ದಾಳಿಯ ಹೊಣೆ ವಹಿಸಿಕೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಬಾಂಬ್ ದಾಳಿಯಲ್ಲಿ ಕನಿಷ್ಠ 16 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News