ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡ ಥೈಲ್ಯಾಂಡ್ ಮತ್ತು ಕಾಂಬೋಡಿಯಾ
Update: 2025-07-28 17:00 IST
Photo credit: PTI
ಹೊಸದಿಲ್ಲಿ: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ತಮ್ಮ ಗಡಿ ಸಂಘರ್ಷಗಳನ್ನು ಅಂತ್ಯಗೊಳಿಸಲು ತಕ್ಷಣದ, ಷರತ್ತುರಹಿತ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮಲೇಶಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೋಮವಾರ ತಿಳಿಸಿದರು.
ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಲು ಇಬ್ರಾಹಿಂ ಮುಂದಾದ ಬಳಿಕ ಕದನ ವಿರಾಮಕ್ಕೆ ಉಭಯ ದೇಶಗಳ ಸಮ್ಮತಿಯ ಮುದ್ರೆ ಬಿದ್ದಿದೆ.