×
Ad

ಇಸ್ರೇಲ್ ದಾಳಿಯಲ್ಲಿ IRCGಯ ಮೂವರು ಕಮಾಂಡರ್ಗಳ ಹತ್ಯೆ: ವರದಿ

Update: 2025-06-21 19:44 IST

PC : PTI 

ಜೆರುಸಲೇಂ: ಇರಾನ್‌ ನ ಮೇಲೆ ಶನಿವಾರ ಇಸ್ರೇಲ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್(IRCG)ನ ಸಾಗರೋತ್ತರ ವಿಭಾಗದ ಹಿರಿಯ ಕಮಾಂಡರ್ ಸಯೀದ್ ಇಝಾದಿ ಸೇರಿದಂತೆ ಮೂವರು ಕಮಾಂಡರ್ಗಳು ಹತರಾಗಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಗಾಝಾ ಯುದ್ಧದ ಸಂದರ್ಭ ಇಝಾದಿ ಹಮಾಸ್‍ಗೆ ಹಣಕಾಸು ಮತ್ತು ಶಸ್ತ್ರಾಸ್ತ್ರ ಒದಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಹಿರಿಯ ಕಮಾಂಡರ್‍ನ ಹತ್ಯೆಯು ಇಸ್ರೇಲ್‌ ನ ಗುಪ್ತಚರ ಮತ್ತು ವಾಯುಪಡೆಯ ಪ್ರಮುಖ ಸಾಧನೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಹಮಾಸ್ ಹಾಗೂ ಫೆಲೆಸ್ತೀನಿಯನ್ ಸಶಸ್ತ್ರ ಹೋರಾಟಗಾರರ ಮತ್ತೊಂದು ಗುಂಪು ಇಸ್ಲಾಮಿಕ್ ಜಿಹಾದ್ ಜತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಇಝಾದಿ ವಿರುದ್ಧ ಬ್ರಿಟನ್ ಮತ್ತು ಅಮೆರಿಕ ನಿರ್ಬಂಧ ಜಾರಿಗೊಳಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News