ಇರಾನಿನ ಜೊತೆಗಿನ ಯುದ್ಧದಲ್ಲಿ ಇಸ್ರೇಲನ್ನು ಸೋಲಿನಿಂದ ಟ್ರಂಪ್ ರಕ್ಷಿಸಿದ್ದರು: ರಶ್ಯ ಸೇನಾಧಿಕಾರಿ
Update: 2025-06-28 21:16 IST
ಟ್ರಂಪ್ | PC : PTI
ಮಾಸ್ಕೋ: ಇರಾನಿನ ಜೊತೆಗಿನ ಯುದ್ಧದಲ್ಲಿ ಸಂಪೂರ್ಣ ಸೋಲಿನಿಂದ ಇಸ್ರೇಲನ್ನು ಟ್ರಂಪ್ ರಕ್ಷಿಸಿದ್ದರು ಎಂದು ರಶ್ಯ ಸೇನೆಯ ಮುಖ್ಯ ಮಿಲಿಟರಿ-ರಾಜಕೀಯ ನಿರ್ದೇಶನಾಲಯದ ಉಪ ಮುಖ್ಯಸ್ಥ ಲೆ|ಜ| ಆಪ್ಟಿ ಅಲಾಡಿನೋವ್ ಹೇಳಿದ್ದಾರೆ.
ಬಾಂಬ್ ದಾಳಿಯ ಮೂಲಕ ಕೆಲವರನ್ನು ಸಂಧಾನ ಮಾತುಕತೆಗೆ ಬರುವಂತೆ ಒತ್ತಡ ಹಾಕಿರುವುದಾಗಿ ಟ್ರಂಪ್ ಖುಷಿಯಾಗಿದ್ದಾರೆ. ಇಸ್ರೇಲ್ ಹೇಳುತ್ತದೆ ಇರಾನಿನ ಪರಮಾಣು ಸೌಲಭ್ಯಗಳನ್ನು ನಾಶ ಮಾಡಿದ್ದರಿಂದ ತಾನೇ ಗೆದ್ದಿರುವುದಾಗಿ ಇಸ್ರೇಲ್ ಹೇಳುತ್ತಿದೆ. ಈ ಆಕ್ರಮಣದ ಎದುರು ಬಗ್ಗದೆ ದೃಢವಾಗಿ ವಿರೋಧಿಸಿದ್ದರಿಂದ ನಾವೇ ಗೆದ್ದಿದ್ದೇವೆ ಎಂದು ಇರಾನ್ ಹೇಳುತ್ತಿದೆ. ಆದರೆ ಈ ಪ್ರಕರಣದಲ್ಲಿ ಅಮೆರಿಕವು ಇಸ್ರೇಲ್‍ನ ರಕ್ಷಕನ ಪಾತ್ರ ನಿರ್ವಹಿಸಿದೆ. ಈ ಯುದ್ಧದಲ್ಲಿ ಇಸ್ರೇಲನ್ನು ಸೋಲಿನಿಂದ ರಕ್ಷಿಸಿದೆ ' ಎಂದವರು ಹೇಳಿದ್ದಾರೆ.