×
Ad

ರಶ್ಯದಿಂದ ಭಾರತವು ತೈಲ ಖರೀದಿ ಸ್ಥಗಿತಗೊಳಿಸಿದೆ ಎಂದ ಟ್ರಂಪ್

Update: 2025-08-02 21:08 IST

ಡೊನಾಲ್ಡ್ ಟ್ರಂಪ್ | PC :  X 

ಹೊಸದಿಲ್ಲಿ,ಆ.2: ಭಾರತವು ರಶ್ಯದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸಿರುವ ಬಗ್ಗೆ ವರದಿಗಳು ಬಂದಿದ್ದು, ಒಂದು ವೇಳೆ ದೃಢಪಟ್ಟಲ್ಲಿ ಇದೊಂದು ‘ಉತ್ತಮ ಹೆಜ್ಜೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ವಾಶಿಂಗ್ಟನ್‌ನಲ್ಲಿ ಶುಕ್ರವಾರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘‘ಭಾರತವು ರಶ್ಯದಿಂದ ಈಗ ತೈಲವನ್ನು ಖರೀದಿಸುತ್ತಿಲ್ಲವೆಂದು ನನಗೆ ತಿಳಿದುಬಂದಿದೆ. ನಾನು ಕೇಳಿದ ಈ ಸುದ್ದಿ ನಿಜವೇ ಅಥವಾ ಅಲ್ಲವೇ ಎಂದು ನನಗೆ ಗೊತ್ತಿಲ್ಲ. ಒಂದು ವೇಳೆ ನಿಜವೇ ಆಗಿದ್ದಲ್ಲಿ ಅದೊಂದು ಉತ್ತಮ ಹೆಜ್ಜೆಯಾಗಿದೆ. ಮುಂದೇನಾಗುವುದೋ ನೋಡೋಣ ಎಂದವರು ಹೇಳಿದ್ದಾರೆ.

ರಶ್ಯದಿಂದ ತೈಲ ಹಾಗೂ ಮಿಲಿಟರಿ ಉಪಕರಣಗಳನ್ನು ಖರೀದಿಸುತ್ತಿರುವುದಕ್ಕಾಗಿ ಭಾರತದ ರಫ್ತು ಮಾಡುವ ಉತ್ಪನ್ನಗಳಿಗೆ ಶೇ. 25ರಷ್ಟು ರಿ ಆಮದು ಸುಂಕದ ಜೊತೆಗೆ ದಂಡನ್ನು ಕೂಡಾ ವಿಧಿಸಲು ನಿರ್ಧರಿಸಿರುವುದಾಗಿ ಎರಡು ದಿನಗಳ ಹಿಂದೆ ಟ್ರಂಪ್ ಘೋಷಿಸಿದ್ದರು. ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿ ಪಾಶ್ಚಾತ್ಯ ರಾಷ್ಟ್ರಗಳು ರಶ್ಯಕ್ಕೆ ನಿರ್ಬಂಧವನ್ನು ವಿಧಿಸಿರುವ ಹೊರತಾಗಿಯೂ, ಆ ದೇಶದಿಂದ ತೈಲವನ್ನು ಭಾರತವು ಆಮದು ಮಾಡಿಕೊಳ್ಳುತಿದೆಯೆಂದು ಟ್ರಂಪ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ಹಿಂದೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News