×
Ad

ಕೆನಡಾದ ಮೇಲೆ ಹೆಚ್ಚುವರಿ 10% ಸುಂಕ: ಟ್ರಂಪ್ ಘೋಷಣೆ

Update: 2025-10-26 21:06 IST

ಡೊನಾಲ್ಡ್ ಟ್ರಂಪ್ | PTI

ವಾಷಿಂಗ್ಟನ್, ಅ.26: ಕೆನಡಾದಿಂದ ಆಮದಾಗುವ ಸರಕುಗಳ ಮೇಲೆ ಹೆಚ್ಚುವರಿ 10% ಸುಂಕ ವಿಧಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಕೆನಡಾದ ಒಂಟಾರಿಯೊ ಪ್ರಾಂತೀಯ ಸರಕಾರ ಪ್ರಸಾರ ಮಾಡಿದ ವಿವಾದಾತ್ಮಕ ರೊನಾಲ್ಡ್ ರೇಗನ್ ಜಾಹೀರಾತು ದ್ವೇಷದ ನಡೆ ಆಗಿದೆ. ವಾಸ್ತವಾಂಶಗಳ ಗಂಭೀರ ತಪ್ಪು ನಿರೂಪಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಈ ಮಧ್ಯೆ, ಜಾಹೀರಾತನ್ನು ಹಿಂದಕ್ಕೆ ಪಡೆಯುವುದಾಗಿ ಒಂಟಾರಿಯೊ ಪ್ರೀಮಿರ್ ಡಗ್ ಫೋರ್ಡ್ ಹೇಳಿದ್ದು, ಆದರೆ ಜಾಹೀರಾತು ನ್ಯಾಯಸಮ್ಮತ ವ್ಯಾಪಾರ ಮತ್ತು ಮುಕ್ತ ಮಾರುಕಟ್ಟೆಯ ಸಂದೇಶ ನೀಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News