×
Ad

ಎಪ್‍ಸ್ಟೈನ್ ಫೈಲ್ಸ್‍ಗಳಲ್ಲಿ ಟ್ರಂಪ್ ಹೆಸರು: ಬಾಂಬ್ ಸಿಡಿಸಿದ ಎಲಾನ್ ಮಸ್ಕ್

Update: 2025-06-06 23:00 IST

PC: x.com/CNBC

ವಾಷಿಂಗ್ಟನ್: ಜೆಫ್ರೀ ಎಪ್‍ಸ್ಟೈನ್ ಫೈಲುಗಳಲ್ಲಿ ಟ್ರಂಪ್ ಅವರ ಹೆಸರು ಕಾಣಿಸಿಕೊಂಡಿದೆ. ಆದ್ದರಿಂದಲೇ ಈ ದಾಖಲೆಗಳನ್ನು ಬಹಿರಂಗಗೊಳಿಸಲು ಟ್ರಂಪ್ ಸರಕಾರ ವಿಳಂಬಿಸುತ್ತಿದೆ ಎಂದು ಮಸ್ಕ್ ಅವರು `ಎಕ್ಸ್'ನಲ್ಲಿ ಪೋಸ್ಟ್ ಮಾಡುವ ಮೂಲಕ ಬಾಂಬ್ ಸಿಡಿಸಿದ್ದಾರೆ. `ನಿಜವಾಗಿಯೂ ದೊಡ್ಡ ಬಾಂಬ್ ಹಾಕುವ ಸಮಯ ಇದು. ಡೊನಾಲ್ಡ್ ಟ್ರಂಪ್ ಹೆಸರು ಎಪ್‍ಸ್ಟೈನ್ ಫೈಲುಗಳಲ್ಲಿದೆ. ಆದ್ದರಿಂದಲೇ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ' ಎಂದು ಒಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದರೆ ` ಈ ಪೋಸ್ಟ್ ಅನ್ನು ಮುಂದಿನ ದಿನಗಳಿಗೆ ಗುರುತು ಮಾಡಿಟ್ಟುಕೊಳ್ಳಿ. ಸತ್ಯ ಹೊರಬರಲಿದೆ' ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಎಪ್‍ಸ್ಟೈನ್ ಫೈಲ್ ಬಹಿರಂಗಗೊಳಿಸಬೇಕು ಮತ್ತು ಮಸ್ಕ್ ಅವರ ಹೇಳಿಕೆ ಬಗ್ಗೆ ತನಿಖೆ ನಡೆಸುವಂತೆ ಡೆಮಾಕ್ರಾಟ್ ಪಕ್ಷ ಆಗ್ರಹಿಸಿದೆ.
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News