ಅಲಾಸ್ಕಾದಲ್ಲಿ ಪುಟಿನ್, ಝೆಲೆನ್ಸ್ಕಿ ಜೊತೆ ತ್ರಿಪಕ್ಷೀಯ ಮಾತುಕತೆಗೆ ಟ್ರಂಪ್ ಒಲವು: ವರದಿ
Update: 2025-08-10 22:07 IST
Photo Credit : AFP
ವಾಷಿಂಗ್ಟನ್, ಆ.10: ಅಮೆರಿಕದ ಅಲಾಸ್ಕಾ ರಾಜ್ಯದಲ್ಲಿ ಆಗಸ್ಟ್ 15ರಂದು ರಶ್ಯ ಅಧ್ಯಕ್ಷರ ಜೊತೆಗಿನ ಸಭೆಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಯನ್ನೂ ಆಹ್ವಾನಿಸುವ ಬಗ್ಗೆ ಶ್ವೇತಭವನ ಪರಿಶೀಲಿಸುತ್ತಿರುವುದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.
ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಪ್ರಸ್ತಾವನೆ ಪರಿಶೀಲನೆಯ ಹಂತದಲ್ಲಿದೆ. ಅಲಾಸ್ಕಾದಲ್ಲಿ ರಶ್ಯ ಅಧ್ಯಕ್ಷ ಪುಟಿನ್, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗಿನ ತ್ರಿಪಕ್ಷೀಯ ಶೃಂಗಸಭೆ ನಡೆಸಲು ಅಧ್ಯಕ್ಷ ಟ್ರಂಪ್ ಒಲವು ಹೊಂದಿದ್ದಾರೆ. ಆದರೆ ಪುಟಿನ್ ಕೋರಿಕೆಯ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಭೆ ನಡೆಸಲು ಶ್ವೇತಭವನ ಯೋಜಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ.