×
Ad

ಟಿವಿ, ಸಾಮಾಜಿಕ ಮಾಧ್ಯಮದಲ್ಲಿ ಔಷಧಗಳ ಜಾಹೀರಾತಿನ ನಿಯಂತ್ರಣಕ್ಕೆ ಟ್ರಂಪ್ ಆದೇಶ

Update: 2025-09-10 22:07 IST

ಡೊನಾಲ್ಡ್ ಟ್ರಂಪ್ | PC : PTI

ವಾಷಿಂಗ್ಟನ್, ಸೆ.10: ಟಿವಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ನೀಡುವ ಔಷಧೀಯ ಜಾಹೀರಾತು ಪ್ರಸಾರ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಆಡಳಿತ ಘೋಷಿಸಿದ್ದು ಇದರಿಂದ ಸರಕಾರದ ಖಜಾನೆಗೆ ವಾರ್ಷಿಕ ಕೋಟ್ಯಾಂತರ ಡಾಲರ್ ಜಾಹೀರಾತು ಆದಾಯಕ್ಕೆ ಅಡ್ಡಿಯಾಗುವ ಸಂಭವವಿದೆ.

ಔಷಧೀಯ ಸಂಸ್ಥೆಗಳು ತಮ್ಮ ಉತ್ಪನ್ನಗಳ ಜಾಹೀರಾತಿನ ಜೊತೆಗೆ ಔಷಧಗಳಿಂದ ಆಗುವ ಅಡ್ಡಪರಿಣಾಮದ ಬಗ್ಗೆಯೂ ಮಾಹಿತಿ ನೀಡಬೇಕು. ರೋಗಿಗಳಿಗೆ ಔಷಧಗಳ ಬಗ್ಗೆ ಹೆಚ್ಚು ಪಾರದರ್ಶಕತೆ ಒದಗಿಸಲು ಈ ಕ್ರಮ ಅನಿವಾರ್ಯ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಮೆರಿಕ ಮತ್ತು ನ್ಯೂಝಿಲ್ಯಾಂಡ್‍ ಗಳಲ್ಲಿ ಔಷಧ ಉತ್ಪಾದಿಸುವ ಸಂಸ್ಥೆಗಳು ನೇರವಾಗಿ ಗ್ರಾಹಕರಿಗೆ ಜಾಹೀರಾತು ತಲುಪಿಸಬಹುದು. ಔಷಧೀಯ ಉತ್ಪನ್ನಗಳ ಮೇಲೆ ಸರಕಾರದ ನಿಯಂತ್ರಣವನ್ನು ಹೆಚ್ಚಿಸುವುದು ಆರೋಗ್ಯ ಮತ್ತು ಮಾನವ ಸೇವಾ ಇಲಾಖೆಯ ಕಾರ್ಯದರ್ಶಿ ರಾಬರ್ಟ್ ಎಫ್. ಕೆನಡಿ ಜ್ಯೂ. ಅವರ ದೀರ್ಘಾವಧಿಯ ಆದ್ಯತೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News