ಅಲಾಸ್ಕಾದ ವಾಯುನೆಲೆಯಲ್ಲಿ ಟ್ರಂಪ್- ಪುಟಿನ್ ಸಭೆ: ವರದಿ
Update: 2025-08-14 22:53 IST
ಡೊನಾಲ್ಡ್ ಟ್ರಂಪ್, ವ್ಲಾದಿಮಿರ್ ಪುಟಿನ್ | PTI
ವಾಷಿಂಗ್ಟನ್, ಆ.14: ಶೀತಲ ಯುದ್ಧದ ಸಂದರ್ಭ ರಶ್ಯದೊಂದಿಗೆ ಯುದ್ಧ ಮಾಡಲು ಅಮೆರಿಕ ನಿರ್ಮಿಸಿದ್ದ ಅಲಾಸ್ಕಾದ ವಾಯುನೆಲೆಯಲ್ಲಿ ಶುಕ್ರವಾರ (ಆಗಸ್ಟ್ 15) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಿಲಿಟರಿ ನೆಲೆಯಲ್ಲಿ ಸಭೆಯನ್ನು ಆಯೋಜಿಸುವ ಮೂಲಕ ಅಮೆರಿಕದ ಮಿಲಿಟರಿ ಬಲವನ್ನು ರಶ್ಯ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಬಲವಾದ ಭದ್ರತಾ ವ್ಯವಸ್ಥೆ ಇರುವುದರಿಂದ ಸಂಭಾವ್ಯ ಸಾರ್ವಜನಿಕ ಪ್ರತಿಭಟನೆಯನ್ನು ತಪ್ಪಿಸುತ್ತದೆ ಎಂದು ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.