×
Ad

ಪೆಸಿಫಿಕ್ ಕರಾವಳಿಯಲ್ಲಿ 7.4 ತೀವ್ರತೆಯ ಭೂಕಂಪನ: ರಶ್ಯದಲ್ಲಿ ಸುನಾಮಿ ಮುನ್ನೆಚ್ಚರಿಕೆ

Update: 2025-07-20 14:13 IST

ಸಾಂದರ್ಭಿಕ ಚಿತ್ರ (PTI)

ಮಾಸ್ಕೊ: ರವಿವಾರ ಪೆಸಿಫಿಕ್ ಸಮುದ್ರದ ಬಳಿ 7.4 ತೀವ್ರತೆಯ ಎರಡು ಭಾರಿ ಭೂಕಂಪನ ಸಂಭವಿಸಿದ್ದು, ಇದರ ಬೆನ್ನಿಗೇ,ರಶ್ಯದ ಕಾಂಚತ್ಕಾ ಪೆನಿನ್ಸುಲಾಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ.

ಪೂರ್ವ ಪೆಟ್ರೊಪವ್ಲಾವ್ಸ್ಕ್ ಕಾಂಚತಸ್ಕ್ಸಿ ನಗರದಿಂದ 20 ಕಿಮೀ (12 ಮೈಲಿ) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ಹೇಳಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಸಮೀಪದಲ್ಲೇ 6.7 ತೀವ್ರತೆಯ ಮತ್ತೊಂದು ಭೂಕಂಪನ ದಾಖಲಾಗಿದೆ ಎಂದೂ ತಿಳಿಸಿದೆ.

ರವಿವಾರ ಮುಂಜಾನೆ ರಶ್ಯದ ದೂರದ ಪೂರ್ವ ಪ್ರಾಂತ್ಯವಾದ ಕಾಂಚತ್ಕಾದ ಕರಾವಳಿಯ ಬಳಿ ಸುಮಾರು 6.5ಗಿಂತ ಹೆಚ್ಚು ತೀವ್ರತೆ ಹೊಂದಿದ್ದ ಅವಳಿ ಭೂಕಂಪಗಳು ಸಂಭವಿಸಿವೆ ಎಂದು ಜರ್ಮನ್ ಭೌಗೋಳಿಕ ವಿಜ್ಞಾನಗಳ ಕೇಂದ್ರ ಹೇಳಿದೆ. ಸುಮಾರು 10 ಕಿಮೀ (6 ಮೈಲಿ) ಆಳದಲ್ಲಿ ಕ್ರಮವಾಗಿ 6.6 ಹಾಗೂ 6.7 ತೀವ್ರತೆಯಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಅದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News