×
Ad

ಚಂಡಮಾರುತ | ಮ್ಯಾನ್ಮಾರ್‌ ನಲ್ಲಿ ಮೃತರ ಸಂಖ್ಯೆ 74ಕ್ಕೆ ಏರಿಕೆ ; 89 ಮಂದಿ ನಾಪತ್ತೆ

Update: 2024-09-15 22:25 IST

PC : PTI

ಯಾಂಗಾನ್ : ಮ್ಯಾನ್ಮಾರ್‌ನಲ್ಲಿ ಯಾಗಿ ಚಂಡಮಾರುತದ ಬಳಿಕ ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಕನಿಷ್ಟ 74ಕ್ಕೆ ಏರಿದೆ. 89 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ.

ಕೆಲವು ಪ್ರಾಂತಗಳಿಂದ ಸರಿಯಾದ ಮಾಹಿತಿ ಲಭ್ಯವಾಗಿಲ್ಲದ ಕಾರಣ ಸಾವು-ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಸುಮಾರು 2,40,000 ಜನರನ್ನು ಸ್ಥಳಾಂತರಿಸಲಾಗಿದೆ . ಮಧ್ಯ ಮ್ಯಾನ್ಮಾರ್‍ನ ಮಂಡಾಲೆಯ್ ಮತ್ತು ಬಾಗೊ ಹಾಗೂ ಪೂರ್ವದ ಶಾನ್ ರಾಜ್ಯ, ರಾಜಧಾನಿ ನೈಪಿಟಾವ್‍ನಲ್ಲಿ ಬುಧವಾರದಿಂದ ನಿರಂತರ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ದೇಶದ ಪೂರ್ವ ಮತ್ತು ಮಧ್ಯ ಪ್ರಾಂತದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ 24 ಸೇತುವೆಗಳು, 375 ಶಾಲಾ ಕಟ್ಟಡಗಳು, ಒಂದು ಬೌದ್ಧ ಮಠ, ಐದು ಅಣೆಕಟ್ಟು, 4 ಪಗೋಡ(ಗುಡಿ)ಗಳು, 14 ವಿದ್ಯುತ್ ಟ್ರಾನ್ಸ್‍ಫಾರ್ಮರ್ ಗಳು, 456 ಬೀದಿದೀಪದ ಕಂಬಗಳು, 65,000ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ ಎಂದು ವರದಿ ಹೇಳಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News