×
Ad

ಜೂಲಿಯನ್ ಅಸಾಂಜೆ ಹಸ್ತಾಂತರಕ್ಕೆ ತಡೆ

Update: 2024-03-26 22:57 IST

Photo : AP

ಲಂಡನ್: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜೆಯನ್ನು ಬ್ರಿಟನ್ನಿಂದ ಅಮೆರಿಕಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಲಂಡನ್ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ಅಸಾಂಜೆಗೆ ಮರಣದಂಡನೆ ಶಿಕ್ಷೆ ವಿಧಿಸುವುದಿಲ್ಲ ಎಂದು ಅಮೆರಿಕ ಭರವಸೆ ನೀಡಿದರೆ ಹಸ್ತಾಂತರಿಸಬಹುದು ಎಂದು ಹೈಕೋರ್ಟ್ನ ಆದೇಶ ತಿಳಿಸಿದೆ. ಅಮೆರಿಕದ ಮಿಲಿಟರಿ ರಹಸ್ಯ ದಾಖಲೆ ಹಾಗೂ ರಾಜತಾಂತ್ರಿಕ ದಾಖಲೆಗಳನ್ನು ಬಹಿರಂಗಗೊಳಿಸಿದ ಪ್ರಕರಣದಲ್ಲಿ ಬೇಹುಗಾರಿಕೆ ಕಾಯ್ದೆಯಡಿ ಅಸಾಂಜೆ ವಿರುದ್ಧ ಕಾನೂನುಕ್ರಮ ಕೈಗೊಳ್ಳಲು ಅಮೆರಿಕ ಬಯಸಿದೆ. ಲಂಡನ್ನಲ್ಲಿ ಬಂಧನದಲ್ಲಿರುವ ಅಸಾಂಜೆಯನ್ನು ಅಮೆರಿಕಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕೆಂದು ಅಸಾಂಜೆಯ ವಕೀಲರು ಲಂಡನ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಎಪ್ರಿಲ್ 15ರೊಳಗೆ ಅಮೆರಿಕದ ಭರವಸೆ ಲಭಿಸದಿದ್ದರೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ತೀರ್ಪು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News