×
Ad

ರಶ್ಯದೊಂದಿಗೆ ಶಾಂತಿ ಒಪ್ಪಂದಕ್ಕೆ ಟ್ರಂಪ್ ಗೆ ಒತ್ತಡ ಹೇರಲು ಉಕ್ರೇನ್ ನ ಹೊಸ ತಂತ್ರ; ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಲಾಬಿಗಿಳಿದ ಝೆಲೆನ್ಸ್ಕಿ

Update: 2025-10-09 22:06 IST

 ಡೊನಾಲ್ಡ್ ಟ್ರಂಪ್ , ವೊಲೊಡಿಮಿರ್ ಝೆಲೆನ್ಸ್ಕಿ | Photo Credit : NDTV 

ಕೀವ್: ರಶ್ಯದೊಂದಿಗೆ ಶಾಂತಿ ಒಪ್ಪಂದವೇರ್ಪಡಲು ಸಾಕಷ್ಟು ಒತ್ತಡ ಹೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವೊಲಿಸಲು ಉಕ್ರೇನ್ ಹೊಸ ತಂತ್ರ ಕಂಡುಕೊಂಡಿದೆ. ಅದು ಡೊನಾಲ್ಡ್ ‍ಟ್ರಂಪ್ ರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದು!

ತನಗೆ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಆಗ್ರಹಿಸುತ್ತಿರುವಾಗಲೇ, ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಲು ಇನ್ನೆರಡು ದಿನ ಮಾತ್ರವಿರುವಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡಾ ಸುದ್ದಿಗಾರರೊಂದಿಗೆ ಇಂತಹದೊಂದು ಚಿಂತನೆಯನ್ನು ಹಂಚಿಕೊಂಡಿದ್ದಾರೆ.  

“ಒಂದು ವೇಳೆ ಜಗತ್ತಿಗೆ, ಅದಕ್ಕಿಂತ ಹೆಚ್ಚಾಗಿ ಉಕ್ರೇನ್ ಪ್ರಜೆಗಳಿಗೆ ಕದನ ವಿರಾಮದ ಅವಕಾಶ ಒದಗಿಸುವುದಾದರೆ, ಖಂಡಿತ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲೇಬೇಕು” ಎಂದು ಗುರುವಾರ ಬಿಡುಗಡೆ ಮಾಡಿರುವ ತಮ್ಮ ಹೇಳಿಕೆಯಲ್ಲಿ ಝೆಲೆನ್ಸ್ಕಿ ಅಭಿಪ್ರಾಯ ಪಟ್ಟಿದ್ದಾರೆ.

“ಉಕ್ರೇನ್ ಪರವಾಗಿ ನಾವು ಅವರನ್ನು ನಾಮನಿರ್ದೇಶನ ಮಾಡಲಿದ್ದೇವೆ” ಎಂದೂ ಅವರು ಘೋಷಿಸಿದ್ದಾರೆ.

ಟ್ರಂಪ್ ಅವರ ಬೆಂಬಲವನ್ನು ಪಡೆಯಲು ತೀವ್ರವಾಗಿ ಪ್ರಯತ್ನಿಸುತ್ತಿರುವ ಝೆಲೆನ್ಸ್ಕಿ, ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾದಂತೆಯೂ ತೋರುತ್ತಿದ್ದಾರೆ.

ಒಂದು ವೇಳೆ ತನ್ನ ಹೆಬ್ಬಯಕೆಯ ಅಮೆರಿಕ ಆಯುಧವಾದ ಟೋಮಾಹಾಕ್ ಕ್ಷಿಪಣಿಗಳು ತನಗೆ ದೊರೆತರೆ, ರಶ್ಯಗೆ ಗಂಭೀರ ಸ್ವರೂಪದ ಹಾನಿಯನ್ನುಂಟು ಮಾಡಬಹುದು ಹಾಗೂ ಅದನ್ನು ಕದನ ವಿರಾಮ ಮಾತುಕತೆಯ ಮೇಜಿಗೆ ಕರೆ ತರಬಹುದು ಎಂಬುದು ಉಕ್ರೇನ್ ನ ತಂತ್ರವಾಗಿದೆ.

ಇದಕ್ಕೂ ಮುನ್ನ, ಹಲವಾರು ಶಾಂತಿ ಒಪ್ಪಂದಗಳನ್ನು ಸಾಧಿಸಿರುವುದರಿಂದ, ಶ್ವೇತ ಭವನದ ತನ್ನ ನಾಲ್ವರು ಪೂರ್ವ ಉತ್ತರಾಧಿಕಾರಿಗಳಿಗೆ ನೀಡಲಾಗಿರುವ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತನಗೂ ನೀಡಬೇಕು ಎಂದು ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News