×
Ad

ಉಕ್ರೇನ್ ಸಮರ: ಸ್ನೇಕ್ ಐಲ್ಯಾಂಡ್‌ನಲ್ಲಿ ರಶ್ಯದಿಂದ ಅಮೆರಿಕ ನಿರ್ಮಿತ ಸ್ಪೀಡ್‌ಬೋಟ್ ಧ್ವಂಸ

Update: 2023-08-22 22:45 IST

Photo:wikipedia/Snake_Island

ಮಾಸ್ಕೊ: ಕಪ್ಪು ಸಮುದ್ರ ಸಮೀಪದ ಸ್ನೇಕ್ ಐಲ್ಯಾಂಡ್‌ನಲ್ಲಿ ಅಮೆರಿಕ ನಿರ್ಮಿತ ಸೇನಾ ಸ್ಪೀಡ್‌ಬೋಟ್ ಒಂದನ್ನು ನಾಶಪಡಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಪುಟ್ಟ ದ್ವೀಪವಾದ ಸ್ನೇಕ್ ಐಲ್ಯಾಂಡ್, ರಶ್ಯ ವಿರುದ್ಧದ ಸಮರದ ಆರಂಭದ ದಿನಗಳಲ್ಲಿ ಉಕ್ರೇನ್ ತೋರಿದ ದಿಟ್ಟ ಪ್ರತಿರೋಧಕ್ಕೆ ಸಾಕ್ಷಿಯಾಗಿತ್ತು. 2022ರ ಫೆಬ್ರವರಿ 24ರಂದು ಮೊಸ್ಕವಾ ಯುದ್ಧ ನೌಕೆಯಲ್ಲಿ ಕಪ್ಪುಸಮುದ್ರಕ್ಕೆ ದಾಳಿಯಿಟ್ಟ ರಶ್ಯದ ಸೇನಾಧಿಕಾರಿಗಳು, ದ್ವೀಪದಲ್ಲಿ ನಿಯೋಜಿತಾಗಿದ್ದ ಉಕ್ರೇನ್ ಸೈನಿಕರಿಗೆ ಶರಣಾಗುವಂತೆಯೂ ತಪ್ಪಿದಲ್ಲಿ ಸಾಯಲು ಸಿದ್ಥರಾಗುವಂತೆ ಬೆದರಿಕೆ ಹಾಕಿದ್ದರು.

ಆದರೆ ಉಕ್ರೇನ್ ಯೋಧರು ರಶ್ಯದ ಬೆದರಿಕೆಗೆ ಮಣಿಯದೆ ಪ್ರಾಣದ ಹಂಗು ತೊರೆದು ಹೋರಾಡಿದ್ದರು. ರಶ್ಯವು ಈ ದ್ವೀಪವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತಾದರೂ ತನ್ನ ಹಲವು ಸೈನಿಕರನ್ನು ಕಳೆದುಕೊಳ್ಳಬೇಕಾಯಿತು ಈ ವರ್ಷದ ಜೂನ್ 30ರಂದು ಈ ದ್ವೀವನ್ನು ರಶ್ಯನ್ ಸೈನಿಕರು ತೊರೆದುಹೋದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News