×
Ad

ಯುನೆಸ್ಕೋದ ‘ಅಮೂರ್ತ ಪರಂಪರೆ’ ಪಟ್ಟಿಗೆ 55 ನಾಮನಿರ್ದೇಶನ

Update: 2023-12-05 23:42 IST

ಪ್ಯಾರಿಸ್: ವಿಶ್ವಸಂಸ್ಥೆ ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೋ)ಯ ಅಮೂರ್ತ ಪರಂಪರೆ ಸಮಿತಿಯು ಈ ವಾರ ಒಟ್ಟು 55 ನಾಮನಿರ್ದೇಶನಗಳನ್ನು ಪರಿಶೀಲಿಸಿ ಅನುಮೋದಿಸುವ ನಿರೀಕ್ಷೆಯಿದೆ.

ಒಪೆರಾ ಗಾಯನವನ್ನು ಸೇರಿಸಲು ಇಟಲಿ ಬಿಡ್ ಸಲ್ಲಿಸಿದರೆ, ಬಾಂಗ್ಲಾದೇಶವು ರಿಕ್ಷಾ(ಸೈಕಲ್ ರಿಕ್ಷಾ)ಗಳಲ್ಲಿ ಚಿತ್ರಿಸಿರುವ ಚಿತ್ರಕಲೆಯನ್ನು ಸೇರಿಸಲು ಬಿಡ್ ಸಲ್ಲಿಸಿದೆ. ಪೆರು ಕಚ್ಛಾ ಮೀನಿನ ಸಾಂಪ್ರದಾಯಿಕ ಭಕ್ಷ್ಯ ‘ಸೆವಿಚೆ’ಗೆ ಬಿಡ್ ಸಲ್ಲಿಸಿದರೆ, ಅಝರ್‌ಬೈಜಾನ್, ಇರಾನ್, ಉಜ್ಬೇಕಿಸ್ತಾನ ಮತ್ತು ಟರ್ಕಿಗಳು ಒಟ್ಟಾಗಿ ‘ಇಫ್ತಾರ್’ ಊಟವನ್ನು ಸೇರಿಸಲು ಬಿಡ್ ಸಲ್ಲಿಸಿದೆ. ಐವರಿಕೋಸ್ಟ್ ಸಾಂಪ್ರದಾಯಿಕ ನೇಯ್ಗೆ ಬಟ್ಟೆ, ಕ್ಯೂಬಾ ಮತ್ತು ಮೆಕ್ಸಿಕೋಗಳು ಬೊಲೆರೊ ನೃತ್ಯವನ್ನು ಸೇರಿಸಲು ಬಿಡ್ ಸಲ್ಲಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News