ಗಾಝಾ ನರಮೇಧ | ಇಸ್ರೇಲ್ ಶೈಕ್ಷಣಿಕ ಸಂಸ್ಥೆಗಳ ಜೊತೆಗಿನ ಸಂಬಂಧ ಕಡಿದುಕೊಂಡ ಜಗತ್ತಿನ ಹಲವಾರು ವಿಶ್ವವಿದ್ಯಾಲಯಗಳು; ವರದಿ
ಸಾಂದರ್ಭಿಕ ಚಿತ್ರ (AI)
ಲಂಡನ್: ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಇಸ್ರೇಲ್ ಶೈಕ್ಷಣಿಕ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದು ಆರೋಪಿಸಿ ಜಗತ್ತಿನ ಹಲವಾರು ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಇಸ್ರೇಲ್ ಶಿಕ್ಷಣ ಸಂಸ್ಥೆಗಳೊಂದಿಗೆ ತಮ್ಮ ಸಂಬಂಧ ಕಡಿತಗೊಳಿಸಿರುವ ಬಗ್ಗೆ theguardian.com ವರದಿ ಮಾಡಿದೆ.
ಗಾಝಾ ಆರೋಗ್ಯ ಸಚಿವಾಲಯದ ಪ್ರಕಾರ, ಗಾಝಾದಲ್ಲಿ ಈಗಾಗಲೇ 63,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಯುಎನ್ ಪ್ರಕಾರ, ಗಾಝಾದ ಬಹುಭಾಗ ನಾಶವಾಗಿದ್ದು, ಗಾಝಾದಲ್ಲಿ ಮಾನವ ನಿರ್ಮಿತ ಕ್ಷಾಮ ಮನೆ ಮಾಡಿದೆ.
ವಿಶ್ವದಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಇಸ್ರೇಲ್ ಸಂಸ್ಥೆಗಳಿಂದ ದೂರ ಉಳಿದಿವೆ. ಇವುಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಹೆಚ್ಚಳವಾಗಿದೆ. ಕಳೆದ ವರ್ಷ ಬ್ರೆಝಿಲ್‌ನ ಸಿಯೆರಾ ಫೆಡರಲ್ ವಿಶ್ವವಿದ್ಯಾಲಯ ಇಸ್ರೇಲ್ ವಿಶ್ವವಿದ್ಯಾಲಯದೊಂದಿಗಿನ ಶೃಂಗಸಭೆಯನ್ನು ರದ್ದುಗೊಳಿಸಿದೆ. ನಾರ್ವೆ, ಬೆಲ್ಜಿಯಂ ಮತ್ತು ಸ್ಪೇನ್‌ನಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು ಇಸ್ರೇಲ್ ಸಂಸ್ಥೆಗಳೊಂದಿಗೆ ಸಂಬಂಧವನ್ನು ಕಡಿತಗೊಳಿಸಿವೆ.
ಆಮ್ಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯವು ಜೆರುಸಲೇಂನ ಹೀಬ್ರೂ ವಿಶ್ವವಿದ್ಯಾಲಯದೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದೆ. ಯುರೋಪಿಯನ್ ಅಸೋಸಿಯೇಷನ್ ಆಫ್ ಸೋಶಿಯಲ್ ಆಂಥ್ರೊಪೊಲಜಿಸ್ಟ್ಸ್ ಇಸ್ರೇಲ್ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕಾರ ಸಂಬಂಧವನ್ನು ಮುಂದುವರಿಸುವುದಿಲ್ಲ ಎಂದು ಘೋಷಿಸಿದೆ. ಯುರೋಪಿಯನ್ ಅಸೋಸಿಯೇಷನ್ ಆಫ್ ಸೋಶಿಯಲ್ ಆಂಥ್ರೊಪೊಲಾಜಿಸ್ಟ್ಸ್ ಇಸ್ರೇಲ್ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕರಿಸುವುದಿಲ್ಲ ಎಂದು ಘೋಷಿಸಿದೆ.
ಇದಲ್ಲದೆ ಲಂಡನ್, ಫ್ರಾನ್ಸ್ ಮತ್ತು ಜರ್ಮನಿಯ ಕೆಲವು ಸಂಸ್ಥೆಗಳು ಇಸ್ರೇಲ್ ಶೈಕ್ಷಣಿಕ ಸಂಸ್ಥೆಗಳ ಜೊತೆ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಘೋಷಿಸಿವೆ.
ಇಸ್ರೇಲ್‌ಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬಹಿಷ್ಕಾರ ಅಭಿಯಾನದ ಭಾಗವಾಗಿರುವ ಸ್ಟೆಫನಿ ಆಡಮ್, ಇಸ್ರೇಲ್ ವಿಶ್ವವಿದ್ಯಾಲಯಗಳು ಮಿಲಿಟರಿ ಸಂಸ್ಥೆಗಳಿಗೆ ಸಂಸ್ಥೆಗಳಿಗೆ ಸಹಕಾರ ನೀಡುತ್ತಿದೆ. ಇಸ್ರೇಲ್ ವಿಶ್ವವಿದ್ಯಾಲಯಗಳೊಂದಿಗಿನ ಸಂಬಂಧವನ್ನು ಕೊನೆಗೊಳಿಸುವ ನೈತಿಕ ಮತ್ತು ಕಾನೂನುಬದ್ಧ ಬಾಧ್ಯತೆ ಇದೆ ಎಂದು ಹೇಳಿದ್ದಾರೆ.