×
Ad

ಮಧ್ಯಪ್ರಾಚ್ಯಕ್ಕೆ `ರಕ್ಷಣಾತ್ಮಕ ಪಡೆ' ನಿಯೋಜಿಸಿದ ಅಮೆರಿಕ

Update: 2025-06-17 20:39 IST

PC | Reuters

ವಾಷಿಂಗ್ಟನ್: ಅಮೆರಿಕವು 12ಕ್ಕೂ ಅಧಿಕ ಯುದ್ಧವಿಮಾನಗಳನ್ನು ಯುರೋಪ್‍ಗೆ ರವಾನಿಸಿದ್ದು ಅಮೆರಿಕದ ಹಿತಾಸಕ್ತಿಗಳ ರಕ್ಷಣೆಗೆ ಅಗತ್ಯಬಿದ್ದರೆ ಇವುಗಳನ್ನು ಮಧ್ಯಪ್ರಾಚ್ಯದ ಸಮೀಪದಲ್ಲಿ ನಿಯೋಜಿಸಲು ಉದ್ದೇಶಿಸಿರುವುದಾಗಿ ವರದಿಯಾಗಿದೆ.

ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಸಾಮರ್ಥ್ಯಗಳನ್ನೂ ನಿಯೋಜಿಸಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆಥ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೆರಿಕದ ಪಡೆಗಳನ್ನು ರಕ್ಷಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಮತ್ತು ಹೆಚ್ಚುವರಿ ಭದ್ರತಾ ಪಡೆಯ ನಿಯೋಜನೆ ಈ ವಲಯದಲ್ಲಿ ನಮ್ಮ ರಕ್ಷಣಾತ್ಮಕ ನಿಲುವನ್ನು ಹೆಚ್ಚಿಸಲು ಉದ್ದೇಶಿಸಿದೆ ಎಂದವರು ಹೇಳಿದ್ದಾರೆ. ಈ ನಡೆಯು ಅಮೆರಿಕವೂ ಯುದ್ಧಕ್ಕೆ ಸೇರಿಕೊಂಡಿರುವ ಸೂಚನೆಯಾಗಿದೆ ಎಂಬ ಹೇಳಿಕೆಯನ್ನು ಶ್ವೇತಭವನದ ವಕ್ತಾರರು ನಿರಾಕರಿಸಿದ್ದು ಅಮೆರಿಕದ ಹಿತಾಸಕ್ತಿಯ ರಕ್ಷಣೆ ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News