×
Ad

ಗಾಝಾ ನಿವಾಸಿಗಳಿಗೆ ವೈದ್ಯಕೀಯ ವೀಸಾ ಸ್ಥಗಿತಗೊಳಿಸಿದ ಟ್ರಂಪ್ ಸರಕಾರ

ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಬಲಪಂಥೀಯ ಕಾರ್ಯಕರ್ತೆ ಆರೋಪಿಸಿದ ಬೆನ್ನಲ್ಲೇ ನಡೆದ ಬೆಳವಣಿಗೆ

Update: 2025-08-17 13:09 IST

Photo credit: PTI

ವಾಷಿಂಗ್ಟನ್ : ಅಮೆರಿಕದಲ್ಲಿ ವೈದ್ಯಕೀಯ ಆರೈಕೆ ಬಯಸುವ ಗಾಝಾ ಪಟ್ಟಿಯ ಜನರಿಗೆ ಸಂದರ್ಶಕ ವೀಸಾಗಳ ಅನುಮೋದನೆಯನ್ನು ಸ್ಥಗಿತಗೊಳಿಸಿರುವುದಾಗಿ ಟ್ರಂಪ್ ಸರಕಾರ ಘೋಷಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅಮೆರಿಕದ ವಿದೇಶಾಂಗ ಇಲಾಖೆ, ನಾವು ಸಂಪೂರ್ಣವಾಗಿ ಪರಿಶೀಲನೆ ನಡೆಸುವವರೆಗೆ ಗಾಝಾದ ಜನರಿಗೆ ನೀಡುತ್ತಿದ್ದ ಎಲ್ಲಾ ಸಂದರ್ಶಕ ವೀಸಾಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.

“ಮಾನವೀಯ ಸಂಸ್ಥೆಗಳ ನೆರವಿನಿಂದ ಫೆಲೆಸ್ತೀನ್‌ ಜನರು ವಿವಿಧ ವಿಮಾನ ನಿಲ್ದಾಣಗಳ ಮೂಲಕ ಅಮೆರಿಕವನ್ನು ಪ್ರವೇಶಿಸುತ್ತಿದ್ದಾರೆ. ವಿದೇಶಾಂಗ ಇಲಾಖೆ ಇಷ್ಟೊಂದು ಜನರಿಗೆ ವೀಸಾ ನೀಡುವುದು ಹೇಗೆ ಸಾಧ್ಯ?” ಎಂದು ಬಲಪಂಥೀಯ ಕಾರ್ಯಕರ್ತೆ ಲಾರಾ ಲೂಮರ್ ಪ್ರಶ್ನಿಸಿದ್ದರು. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಅವರು ಕರೆದಿದ್ದರು.

ಗಾಝಾ ನಿರಾಶ್ರಿತರೆಂದು ಹೇಳಿಕೊಳ್ಳುವ ಫೆಲೆಸ್ತೀನ್‌ ನಾಗರಿಕರು 'ಹೀಲ್ ಫೆಲೆಸ್ತೀನ್'(HEAL Palestine) ಎಂಬ ಗುಂಪಿನ ಸಹಾಯದಿಂದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಹೂಸ್ಟನ್ ಮೂಲಕ ಅಮೆರಿಕಕ್ಕೆ ಬರುತ್ತಿದ್ದಾರೆ. ಟ್ರಂಪ್ ಆಡಳಿತದಲ್ಲಿ ಫೆಲೆಸ್ತೀನ್ ಜನರು ಇಷ್ಟೊಂದು ವೀಸಾ ಹೇಗೆ ಪಡೆದರು? ಇದಕ್ಕೆ ಸ್ಟೇಟ್ ಡಿಪಾರ್ಟ್ಮೆಂಟ್ ಅನುಮತಿಸಿದೆಯೇ? ಅವರು ಗಾಝಾದಿಂದ ಹೇಗೆ ಹೊರಬಂದರು? ಎಂದು ಪ್ರಶ್ನಿಸಿದ್ದರು.

ʼಹೀಲ್ ಫೆಲೆಸ್ತೀನ್” ವೆಬ್‌ಸೈಟ್‌ ಪ್ರಕಾರ, ಗಾಝಾದಲ್ಲಿ ಗಾಯಗೊಂಡ 63 ಮಕ್ಕಳು ಸೇರಿದಂತೆ ಒಟ್ಟು 148 ಜನರನ್ನು ಅಮೆರಿಕಗೆ ವೈದ್ಯಕೀಯ ಆರೈಕೆಗಾಗಿ ಸ್ಥಳಾಂತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News